ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳ ಕವಿತೆ

ಈರಪ್ಪ ಬಿಜಲಿಯವರ ಮಕ್ಕಳ ಪದ್ಯ-

ಬಿಡಿಸೋಣ ಬಾ ಗಾಂಧಿ ಚಿತ್ರ

ಬಾರೊ ಭೀಮ ಬಾರೊ ಶಾಮ
ಚಿತ್ರವನ್ನು ಬಿಡಿಸೋಣ
ತಾರೊ ಬಿಳಿಯ ಹಾಳೆ ಸನಿಹ
ಗಾಂಧಿ ಚಿತ್ರ ಬಿಡಿಸೋಣ ||

ಗಾಂಧಿ ಅಂದ್ರೆ ಯಾವ ಗಾಂಧಿ
ರಂಗ ಹೇಳೊ ನೀ ಬೇಗ
ಗಾಂಧಿ ಅಂದ್ರೆ ಮೋಹನ್ ದಾಸ
ಕರಮ ಚಂದ್ರ ಗಾಂಧೀಜಿ||

ಮೂಗ‌ ಮೇಲೆ ದುಂಡು ಚಸ್ಮಾ
ಕರದಿ ಉದ್ದ ಕೋಲಣ್ಣ
ನಗುವ ವದನ ತುಂಬು ಗಗನ
ಬಿಳಿಯ ವಸ್ತ್ರ ನೋಡಣ್ಣ ||

ನಮ್ಮ ದೇಶದ ಪರಮ ಪುರುಷ
ಶ್ರೀ ಮಹಾತ್ಮ ಗಾಂಧೀಜಿ
ವರ್ಣಬೇಧ ನೀಗಿದಂಥ
ರಾಷ್ಟ್ರಪಿತರು ಬಾಪೂಜಿ ||

ರಂಗ ಮಿತ್ರ ನಿನ್ನ ಉತ್ರ
ಕೇಳಿ ಹೃದಯ ತಂಪಾತು
ಈಗ್ಲೆ ಬಿಡಿಸಿ ಬಿಡುವ ಆಸೆ
ಮನದಿ ಪುಟಿದು ಹೆಚ್ಚಾಯ್ತು ||


ಈರಪ್ಪ ಬಿಜಲಿ

About The Author

Leave a Reply

You cannot copy content of this page

Scroll to Top