ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್

ಗಜಲ್ (ಮಾತ್ರೆ ೨೬)
ಜೊತೆಯಲಿ ಬಾಳಿದ ಹಕ್ಕಿ ಗೂಡು ಮರೆತಿದೆ ನೀ ತೊರೆದ ಮೇಲೆ
ಹಿತ್ತಲದ ಬಳ್ಳಿಯು ಬಾಡಿ ನೆಲಕಚ್ಚಿದೆ ನೀ ತೊರೆದ ಮೇಲೆ
ಕರಿ ಮುಗಿಲು ಕಂಡ ನವಿಲು ಕುಣಿಯುತಿದೆ ಹಿಗ್ಗಲಿ ಜಗವ ಮರೆತು
ಸಂತಸದಿ ನಲಿಯುವ ಮನ ಮಂಕಾಗಿದೆ ನೀ ತೊರೆದ ಮೇಲೆ
ಅಂಗಳದಲಿ ದೀಪಾವಳಿಯ ದೀಪವು ಝಗ ಮಗಿಸಿ ಬೆಳಗುತಿದೆ
ಹೃದಯ ಮಂದಿರದಿ ಕತ್ತಲೆ ಆವರಿಸಿದೆ ನೀ ತೊರೆದ ಮೇಲೆ
ಶ್ರಾವಣದ ಜಿಟಿ ಜಿಟಿ ಮಳೆಗೆ ಧಾರಿಣಿ ಹಸಿರುಟ್ಟು ನಲಿಯುತಿದೆ
ನಯನದಿ ನೋವ ಕಂಬನಿ ಕೋಡಿ ಹರಿದಿದೆ ನೀ ತೊರದ ಮೇಲೆ
ಚಕೋರ ಓಲಾಡುತಿದೆ ಹುಣ್ಣಿಮೆ ತಂಗದಿರ ಕಿರಣ ನುಂಗಿ
ಚಂದಿರ”ಪ್ರಭೆ” ತಂಪನು ಕಳೆದುಕೊಂಡಿದೆ ನೀ ತೊರೆದ ಮೇಲೆ
ಪ್ರಭಾವತಿ ಎಸ್ ದೇಸಾಯಿ





1 thought on “ಪ್ರಭಾವತಿ ಎಸ್ ದೇಸಾಯಿ-ಗಜಲ್”