ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಹುಡುಕ ಬೇಡ.

An abounded road in the desert

ಹುಡುಕ ಬೇಡ
ಹೋಗುವ ಹಾದಿಯಲ್ಲಿ
ಕಾಲಿಗೆ ಚುಚ್ಚುವ
ಕಲ್ಲು ಮುಳ್ಳುಗಳನು

ಗೊಣಗಬೇಡ
ನೆತ್ತಿಯ ಮೇಲಿನ
ಸುಡುವ
ಉರಿವ ಬಿಸಿಲಿಗೆ

ನಡುಕ ಬೇಡ
ಹೊರಗಿನ
ಕೊರೆವ
ತಂಪು ಚಳಿಗೆ

ಶಪಿಸ ಬೇಡ
ಸುರಿವ ಮೋಡ
ಧಾರಾಕಾರ
ತೊಯ್ವ ಮಳಿಗೆ

ಹುಡುಕಬೇಡ ನಮ್ಮೊಳು
ರಸ ಗುಣ ತಮಸ ಸುಖ
ಬದುಕಿ ಬಿಡೋಣ ಪ್ರೀತಿ ಹಂಚಿ

ಮಳೆ ಬಿಸಿಲು ಗಾಳಿಯಂತೆ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

21 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಹುಡುಕ ಬೇಡ.”

  1. ದೀಪಾ ಜಿಗಬಡ್ಡಿ

    ವಾವ್ ಗ್ರೇಟ್ ಒಂದು ಸುಂದರ ಭಾವ ಪ್ರಜ್ಞೆ ತಮ್ಮ ಕವನದಲ್ಲಿ ಮೂಡಿ ಬಂದಿದೆ

  2. ತುಂಬಾ ಸುಂದರ ಅನುಭಾವ…. ದಾರಿ ಹೂವಿನಿಂದ ಕೂಡಿದೆ ಎಂಬ ಅದ್ಭುತ ಕಲ್ಪನೆ ಚೆನ್ನಾಗಿದೆ.. ಸರ್….

  3. ಸುಜಾತಾ ಪಾಟೀಲ ಸಂಕ

    ಅರ್ಥಪೂರ್ಣ ಸುಂದರ ಭಾವ ತೋರಣ ನಿಮ್ಮ ಕವನ

  4. ರಾಜೇಶ್ವರಿ

    ನಿಜಕ್ಕೂ ತಮ್ಮ ಕವನದಲ್ಲಿ ಮೂಡಿ ಬಂದ ತತ್ವ ಸಿದ್ಧಾಂತ

  5. ಹೌದು… ಜೀವನದಲ್ಲಿನ ಅಡೆತಡೆಗಳನ್ನು ಶಪಿಸದೆ… ಗೊಣಗದೆ…. ಎಲ್ಲರೊಳು ಸಹಬಾಳ್ವೆಯಿಂದ ಪ್ರೀತಿ ಹಂಚಿ ಸುಖ -ದುಃಖಗಳ ಸಮ್ಮಿಲನದೊಂದಿಗೆ ಬಾಳಲು ಕಲಿಯುವುದೇ ಜಾಣತನದ ಲಕ್ಷಣ….. ಬದುಕನ್ನು ಹೇಗೆ ನೋಡಬೇಕು ಎನ್ನುವ ಸುಂದರ ಕವನ

  6. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಭಾವಪೂರ್ಣ ಕವಿತೆ,ಆಸೆಯೊಂದಿಗೆ ಬದುಕಬೇಕು ಎಂಬ ಆಶಯವನ್ನು ಮೂಡಿಸುವ ಕವನ ಸುಂದರವಾಗಿದೆ

  7. ಬದುಕಿ ಬಿಡೋಣ ಪ್ರೀತಿ ಹಂಚಿ
    ಮಳೆ ಬಿಸಿಲು ಗಾಳಿಯಂತೆ…
    ಎನ್ನುವ ಸರಳ… ಸುಂದರ… ಸಾಲುಗಳ ಕವನ
    ಎಲ್ಲರ ಮನ ಮುಟ್ಟಿ…. ಜೀವನದಲ್ಲಿ ಕೇವಲ ಲೋಪಗಳನ್ನು ಎಣಿಸದೆ ಒಲುಮೆಯಿಂದ ಬಾಳಬೇಕೆನ್ನುವ
    ಉದಾತ್ತ ಭಾವನೆಯನ್ನು ಸ್ಫುರಿಸಿದವು

  8. ಜೀವನದಲ್ಲಿ ಬಂದದ್ದನ್ನು ಬಂದ ಹಾಗೆ ಸ್ವೀಕರಿಸೋಣ…. ಎನ್ನುವ ಸಿದ್ಧಾಂತ… ಅತ್ಯುತ್ತಮ ಕವನ

Leave a Reply

You cannot copy content of this page

Scroll to Top