ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಡೋ.ನಾ.ವೆಂಕಟೇಶ

ಸಾಹಿತ್ಯ ಸಮನ್ವಯಿಸಿದ ವೈದ್ಯ

ವೈದ್ಯ ಸಾಹಿತ್ಸ ಸಮ್ಮೇಳನಗಳ ಹುಟ್ಟು-

ಶಿಶು ಹುಟ್ಟಿದಾಗ ವೈದ್ಯ
ನುಡಿಸಿದ ಮೊದಲ ನಾದ
ತರಂಗ-

ಬೆನ್ನು ತಟ್ಟಿ ಹಾಡಿಸಿದ
ಹೊಸ ರಾಗಕ್ಕೆ
ತಾಳ ಹಾಕಿ ಬರೆದಾಗ
ಸೃಷ್ಟಿಯಾಯಿತು
ವೈದ್ಯನ ಸಾಹಿತ್ಯ ಸಮ್ಮೇಳನ!

ವೈದ್ಯ ಸಾಹಿತ್ಯಕ್ಕೆ
ಒಂದು ಚೆನ್ನುಡಿ
ಮತ್ತೆಲ್ಲ ಮುನ್ನುಡಿ ಹಿನ್ನುಡಿ
ಸೃಜನಶೀಲ ವೈದ್ಯನ
ಸಾಹಿತ್ಯಜನ್ಯ ಸಂಸ್ಕಾರ

ನಿಜಕ್ಕೂ ವೈದ್ಯ ನಿನ್ನ ಜೀವನದ
ಅನುದಿನವೂ ಸಾಹಿತ್ಯಾರಾಧನೆ !
ಬೆಳೆದಂತೆಲ್ಲಾ ಕುಂತು
ನಿಂತಾಗಲೆಲ್ಲ ಆ ಅವನ
ಆಲಾಪಗಳ
ಪ್ರಲಾಪಗಳ ಕೇಳುತ್ತ ಕೇಳುತ್ತ

ವೈದ್ಯ ನಿನ್ನ ಸಾಹಿತ್ಯದ ಸಮ್ಮೇಳನ
ಹೊಸ ಸಂಕೀರ್ಣಗಳ
ಹೊಸ ಆಯಾಮಗಳ
ಹೊಸ ನಡಾವಳಿಗಳ
ಕಂಡಿತ್ತು !

ಸಮ್ಮೇಳನಗಳ ಸಾಂಧರ್ಭಿಕ
ಕೃತಿಗಳ ಕರ್ತವ್ಯಗಳ ಕೃತಜ್ಞತೆಗಳ
ಹಾಗೂ ಕೃತಘ್ನತೆಗಳ
ಕಂಡು ಕೊಂಡಿತ್ತು!

ರವಿ ಕಾಣದ್ದ ಕವಿ ಕಂಡ
ಕವಿ ಕಂಡದ್ದು ಕಾಣದ್ದನ್ನೆಲ್ಲ-

ವೈದ್ಯನ ಸಾಹಿತ್ಯ ಕನಸಿದ್ದೆ ಎಲ್ಲ
ಪ್ರಚಂಡ!!


ಡಾ ಡೋ.ನಾ.ವೆಂಕಟೇಶ

About The Author

4 thoughts on “ಡಾ ಡೋ.ನಾ.ವೆಂಕಟೇಶ ಸಾಹಿತ್ಯ ಸಮನ್ವಯಿಸಿದ ವೈದ್ಯ”

  1. ವೈದ್ಯಕೀಯ ನಿಮ್ಮ ಮೂಲ ವೃತ್ತಿ ಆಗಿದ್ದರೂ ಕನ್ನಡ ಸಾಹಿತ್ಯವನ್ನುಬೆಳೆಸಿಕೊಂಡು ನೀವು ಉತ್ತಮ ಸಾಹಿತಿಗಳಾಗಿ ರೂಪುಗೊಂಡಿದ್ದೀರಿ.ನೀವು ತಮ್ಮ ವೃತ್ತಿ ಜೀವನದ ಅನುಭವಗಳನ್ನೇ ದಾಖಲಿಸಿ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದೀರಿ. ಅಭಿನಂದನೆಗಳು.

    1. D N Venkatesha Rao

      ಧನ್ಯವಾದಗಳು ಮಂಜುನಾಥ್! ನಿಮ್ಮ ಎಲ್ಲರ ಅಭಿಮಾನಕ್ಕೆ ನಾ ಋಣಿ!

Leave a Reply

You cannot copy content of this page

Scroll to Top