ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ .ಡೋ ನಾ.ವೆಂಕಟೇಶ

ಬೇಡದಿರು ನನಗಾಗಿ

red rose holding on female hand with red nails polished on her fingers with copy space backgrounds , concept for skin care

ಬದುಕು ನಿನಗಾಗಿ ಪ್ರಿಯೇ
ಬೇಡದಿರು ನನಗಾಗಿ
ಹೊಂಗನಸು ಇರಲಿ ಸದಾ ನಿನಗಾಗಿ

ಇರಲಿ ನಿನಗೆ ಚೆಂಗುಲಾಬಿಯ
ಘಮಘಮಿಸುವ ಕಂಪು
ಇರಲಿ ನಿನಗೆ ಹೊಸ ಹಸಿರಿನ
ಹೊಸ ರಾಗದ ಇಂಪು

ಬೇಡದಿರು ನನಗಾಗಿ ನಿನ್ನ
ಕನಸು
ಬೇಡದಿರು ನನಗಾಗಿ ನಿನ್ನ
ಬಿಸಿಯುಸಿರು

ಕಟ್ಟದಿರು ಸಂಕೋಲೆಯಲಿ
ನನ್ನ ಓ! ಚಿನ್ನ
ಚೆನ್ನಿಹುದು ಈಗ ಈ ಋಣಾನುಬಂಧ

ನಾನೀಗ ಅನಿಕೇತನ
ಗೂಡಿಲ್ಲದ ಚೇತನ!


ಡಾ .ಡೋ ನಾ.ವೆಂಕಟೇಶ

About The Author

Leave a Reply

You cannot copy content of this page

Scroll to Top