ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಶೇಷ ಲೇಖನ

ಕೆ. ಶಿವರಾಮ ಕಾರಂತರು

ಅರುಣ್ ಕುಮಾರ್ ಎಂ

ವಿಷಯ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ ಆಗುವುದು ಯಾವಾಗ?

ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ. ಇದು ಕವಿ ವರ್ಣಿಸುವ ಸುಂದರ ಕಲ್ಪನೆಯ ಹಾಡು. ಕೇಳಲು ಅದೆಷ್ಟು ಸುಂದರ? ಹೌದು ಇದು ನಿಜ ಎನ್ನುವರು ಹಲವರು. ಆದರೆ ವಾಸ್ತವತೆ,?

ಶಾಲೆಗೆ ದಾಖಲಾತಿ ಮಾಡುವ ಸಮಯದಿಂದ ಹಿಡಿದು ಆ ವ್ಯಕ್ತಿ ಸಾಯುವವರಿಗೆ ಪ್ರತಿ ಹಂತದಲ್ಲೂ ಜಾತಿ ವ್ಯವಸ್ಥೆ ಅಡಕವಾಗಿದೆ. ಯಾವ ಜಾತಿ ಎಂದು ಶಾಲೆಗೆ ದಾಖಲಾತಿ ಮಾಡುವಾಗ ಕೇಳುತ್ತಾರೆ. ವಿದ್ಯಾಭ್ಯಾಸದ ಪ್ರತಿ ಹಂತದಲ್ಲೂ ಈ ಜಾತಿಗೆ ಇಷ್ಟು ಆ ಜಾತಿಗೆ ಅಷ್ಟು ಎಂದು ಫೀಸ್ ವಸೂಲಾತಿ ನಡೆಯುತ್ತದೆ. ಜಾತಿ ವ್ಯವಸ್ಥೆ ಅಲ್ಲಿಂದಲೇ ಪ್ರಾರಂಭವಾಗುತ್ತದೆ. ಯಾವ ಜಾತಿಯ ಮಕ್ಕಳು ಎಷ್ಟು ಪ್ರಮಾಣದಲ್ಲಿ ದಾಖಲಾಗಿದ್ದಾರೆ. ಹಾಗೆಯೇ ಯಾವ ಧರ್ಮದವರು ಇದು ಸಹ ದಾಖಲಾತಿಗಳಲ್ಲಿ ಬೇಕು. ನಂತರ ಕೆಲಸ ಹುಡುಕುವ ಸಂದರ್ಭದಲ್ಲಿ ಇಂತಿಷ್ಟು ಮೀಸಲಾತಿಗಳು ಇಂತಹ ಜಾತಿಗಳಿಗೆ. ಯಾವುದಾದರೂ ಸ್ಕಾಲರ್ಶಿಪ್ ಬರುವುದಾದರೆ ಇಂತಹ ಜಾತಿಗಳಿಗೆ ಇಂತಿಷ್ಟು. ಹೀಗೆ ಜಾತಿ ವ್ಯವಸ್ಥೆ ಹಾಸು ಹೊಕ್ಕಾಗಿದೆ. ಇದರ ನಂತರ ನಾವು ಯೋಚಿಸಬೇಕಾಗಿರುವುದು ರಾಜಕೀಯ. ಪ್ರತಿಯೊಬ್ಬ ರಾಜಕೀಯ ವ್ಯಕ್ತಿಯು ತಾನು ಚುನಾವಣೆಯಲ್ಲಿ ಭಾಗವಹಿಸಬೇಕಾದರೆ ಯಾವ ಪ್ರದೇಶದಲ್ಲಿ ನಿಂತರೆ ಯಾವ ಜಾತಿಯ ಮತಗಳು ತನಗೆ ಬರುವುದು ಎಂದು ಲೆಕ್ಕಾಚಾರ ಮಾಡುತ್ತಾನೆ. ಮುಖ್ಯಮಂತ್ರಿ ಶಾಸಕರನ್ನು ಆಯ್ಕೆ ಮಾಡಬೇಕಾದರೂ ಸಹ ಯಾವ ಜಾತಿಯ ವ್ಯಕ್ತಿ ಎಂದು ಸಹ ಆಲೋಚನೆ ಮಾಡುತ್ತಾರೆ. ಅಂದರೆ ಜಾತಿಯ ವ್ಯವಸ್ಥೆಯನ್ನು ಬೃಹತ್ ಪ್ರಮಾಣದಲ್ಲಿ ಇಂತಹ ರಾಜಕೀಯ ವ್ಯವಸ್ಥೆಯಲ್ಲಿಯೂ ಸಹ ಅಡಕವಾಗಿದೆ. ಮಠಗಳಲ್ಲಿ ನೋಡಿದರೆ ಪ್ರತಿಯೊಂದು ಜಾತಿಗೆ ಒಂದೊಂದು ಮಠ. ಸಾಯುವಾಗ ಕೊಂಡೊಯ್ಯುವ ಹೆಣವನ್ನು ಇಂತಹ ಜಾತಿಯ ವ್ಯಕ್ತಿಗಳು ಸ್ಮಶಾನಗಳು ಎಂದು ಇರುತ್ತವೆ. ಕನಕದಾಸರ ಕಾಲದಲ್ಲಿ ಬಸವಣ್ಣನವರ ಕಾಲದಲ್ಲಿ ಆ ಸಾಹಿತ್ಯಗಳನ್ನು ಓದುವಾಗ ಎಷ್ಟೊಂದು ಜಾತಿಯ ಪ್ರಭಾವವು ಮನುಜನ ಮೇಲೆ ದೌರ್ಜನ್ಯಗಳನ್ನು ನಡೆಸಲಾಗಿತ್ತು ಎಂದು ಓದುತ್ತೇವೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಕಥೆಯನ್ನು ಓದುವಾಗ ಕಣ್ಣೀರಾಗುತ್ತೇವೆ. ಆದರೆ ಈಗಲೂ ಸಹ ಹಲವಾರು ಪ್ರದೇಶಗಳಲ್ಲಿ ಜಾತಿಯ ವ್ಯವಸ್ಥೆಯನ್ನು ಅಲ್ಲಿನ ದೌರ್ಜನ್ಯವನ್ನು ಕಂಡು ಹೌಹಾರುತ್ತೇವೆ. ಯಾವುದೋ ದೇವರ ವಸ್ತುಗಳನ್ನು ಕೀಳು ಜಾತಿಯ ಹುಡುಗ ಮುಟ್ಟಿದ ಎಂದು ಅಲ್ಲಿನ ಪ್ರದೇಶವನ್ನು ಶುಚಿ ಮಾಡಲಾಗುತ್ತದೆ. ಈಗಲೂ ಸಹ ಜಾತೀಯ ನಿಂದನೆ ಪ್ರಕರಣಗಳು ಕೆಲವರು ಅದನ್ನು ಅನುಕೂಲಕ್ಕೆ ಇನ್ನು ಕೆಲವರು ಅದನ್ನು ತಮ್ಮ ಶಕ್ತಿಗೆ ಉಪಯೋಗಿಸಿಕೊಂಡಿದ್ದಾರೆ. ಕಾನೂನು ಇರುವುದು ಕಾಪಾಡಲೋ ಅಥವಾ ಇದನ್ನು ದುರುಪಯೋಗ ಮಾಡಿಕೊಳ್ಳುವ ವ್ಯಕ್ತಿಗಳಿಗೋ ಎಂದು ಅನುಮಾನ ಉಂಟಾಗುತ್ತದೆ. ಏನೇ ಆದರೂ ಸಹ ಭಾರತದಿಂದ ಪೂರ್ತಿಯಾಗಿ ಜಾತಿಯ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಈಗ ಅಸಾಧ್ಯವಾಗಿದೆ. ಇದನ್ನು ಪೂರ್ಣವಾಗಿ ಸರ್ವ ಜನಾಂಗದ ಶಾಂತಿಯ ತೋಟವಾಗಿ ನಿರ್ಮಿಸ ಹೋಗಬೇಕಾದರೆ, ಪ್ರತಿಯೊಂದು ಹೃದಯದಲ್ಲೂ ಕೋಮು ಸೌಹಾರ್ದತೆ ಎಲ್ಲ ಜಾತಿಯ ಮಕ್ಕಳು ಒಂದೇ ಸಹೋದರತ್ವ ಭಾವ, ಸಮಾನತೆಯ ಧ್ಯೇಯ, ಐಕ್ಯತೆಯ ಮಂತ್ರ, ಸಾಮರಸ್ಯದ ಪಾಠ ಅಂತರ್ಗತವಾದರೆ ಮಾತ್ರ ಸಾಧ್ಯ. ಆ ಕಾಲ ಒಂದು ದಿನ ಬರಬಹುದು ಎನ್ನುವಂತಹ ಕಾಲ್ಪನಿಕ ಭವಿಷ್ಯದ ದಿನಕ್ಕಾಗಿ ಆಶಾಭಾವದಿಂದ ಎದುರು ನೋಡೋಣವೇ?


ಅರುಣ್ ಕುಮಾರ್ ಎಂ

About The Author

Leave a Reply

You cannot copy content of this page

Scroll to Top