ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ-

ಪ್ರವಾದಿ

ನೀ ಬಂದಾಗ ಜಗವಿನ್ನೂ
ಜಡನಿದ್ದೆ ಯಲ್ಲಿತ್ತು
ನೀ ಅಪ್ಪನ ಅಂಬೆಗಾಲಿನ
ಅಂಬಾರಿಮೇಲೆ ಮೆರವಣಿಗೆ ಮಾಡಿದಾಗ
ಜಗವಿನ್ನೂ ಕತ್ತಲೆಯ
ಕೂಪದಲ್ಲಿತ್ತು

ನಿನ್ನ ತೊದಲ ಬಾಯಿಂದ
ಮೊದಲ ಮಾತು ಬಂದಾಗ
ಜಗ ಮೈ ಮುರಿದೆದ್ದಿತ್ತು
ಕಾಲಕ್ಕೆ ಎಚ್ಚರವಾಗಿತ್ತು

ಅಜ್ಞಾನ ಕಾಲಿಗೆ
ಬುದ್ದಿ ಹೇಳಿತ್ತು
ಸೂರ್ಯ ಚಂದ್ರ
ನವಗ್ರಹಗಳಿಗೂ
ನಿಬ್ಬೆರಗಾಗಿತ್ತು !

ಗಿಡ ಮರಗಳಿಲ್ಲ
ತರು ಲತೆಗಳಿಲ್ಲ
ಹಸುರಿನ ಹೆಸರೇ..
ಇಲ್ಲದಾ..ಮರುಭೂಮಿಯ
ಊರಲಿ ಧರ್ಮ ಭೀಜವಬಿತ್ತಿ
ಹೊಸತಂಪುತಂದೆ
ಬಿಸಿಲ ಬೇಗೆಗೆ ಬೆಂದ
ಆ ಮರುಭೂಮಿಯ
ಮರಳಿನಲಿ

ರೋಷಾವೇಶದ
ಮನಸಿನ ಆ.‌.ಕಠೋರ
ಹೃದಯಗಳ
ಅಂಧ ನಂಬಿಕೆಯ
ಮೂಢ ಮೌಡ್ಯಗಳ
ದೂರೀಕರಿಸಿ.ಕರಿಬಿಳಿಯ
ಭೇಧಗಳ ಬೇರ್ಪಡಿಸಿ.
ಜೊಳ್ಳು ಗಟ್ಟಿಗಳ
ವಿಂಗಡಿಸಿ ಸತ್ಯದಾ
ದಾರಿ..ತೋರಿಸಿ ಕೊಟ್ಟೆ.

ನಂಬಿಕೆಯ ಮಾತಿಗೆ
ಇಂಬುಕೊಟ್ಟು
ಕತ್ತಲಲಿ ಬೆಳಕತೋರುವ
ಮಿಂಚಿನಂತೆ ಎಕದೇವೋ
ಪಾಸನೆಯ ತಿಳಿಸಿಕೊಟ್ಟೆ

ತತ್ವಜ್ಞಾನಿಯಲ್ಲ
ಪಂಡಿತನಲ್ಲ.ಅಕ್ಷರಸ್ತನಲ್ಲ ವೇದಾಂತಿಅಲ್ಲ.
ಒಲವ ದನಿಯಿಂದ
ಪ್ರೀತಿ ಕರೆಯಿಂದ
ದೇವನೊಲುಮೆಯ
ದಾರಿ ತಿಳಿಸಿಕೊಟ್ಟೆ

ಭೋಗ ಸುಖದಲಿ
ಮೈಮರೆತು ಆತ್ಮವನೇ
ಕುರುಡಾಗಿಸಿ ದುಸ್ವಾರ್ಥದಲಿ
ಮನುಷ್ಯತ್ವ ಮರೆತು
ಬದುಕು ತಿದ್ದೆಮಗೆ
ಧರ್ಮದ ಬೆಳಕ ತೋರಿಸಿ
ಬದುಕಿನ ಬದುಕು ತಿಳಿಸಿಕೊಟ್ಟೆ.

ಮಬ್ಬಾವರಿಸಿ ದೆದೆಯಲಿ
ಭಕ್ತಿಯ ಬೆಳಕ ತೋರಿಸಿ
ಸುಳ್ಳಿನ ಸೆಳವಿಗೆ
ಸತ್ಯ ದಾಣೆಕಟ್ಟು ಕಟ್ಟಿ
ನೀರೇ ಇಲ್ಲದ ಬೆಟ್ಟದ
ನಡುವೆ ನೀರನ್ನೇ…
ಬೇರೂರಿಸಿ ಬಕುತಿಯ
ಬಾಯಾರಿಕೆ ತೀರಿಸಿಬಿಟ್ಟೆ

ಅದಕಾಗಿ ನೀನಾದೆ
“ಪ್ರವಾದಿ”
ನಿನ್ನಹೆಜ್ಜೆಯಲಿ ಸಾಗುತಿದೆ
ಜಗದ ಹಾದಿ
——————-

ಇಮಾಮ್ ಮದ್ಗಾರ

About The Author

Leave a Reply

You cannot copy content of this page

Scroll to Top