ಇಮಾಮ್ ಮದ್ಗಾರ-ಅರಳಲಿ ಒಲವು

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಅರಳಲಿ ಒಲವು

ಒಲವಿನ ಕಣ್ಣಿನ
ಮುಂಬಾಗಿಲು
ತೆರೆದಿರುವೆ
ನಾಳಿನ ಕನಸಿನೊಂದಿಗೆ
ಗೆಳೆತನ ಮಾಡಿರುವೆ

ಹರಸಲಿ ಪ್ರೀತಿ
ಒಲವಿನಲಿ ನಲಿವು
ತುಂಬಿರಲೆಂದು
ಕನಸಲೂ ಮನಸು
ನೋಯದಿರಲೆಂದು

ಗೊತ್ತಿರದ ಪ್ರಶ್ನೆಗೆ
ಉತ್ತರ ಹುಡುವದು
ಪ್ರೀತಿ
ತುಟಿಯಲುಗಿಸದೇ..
ಮಾತಿನ ಜೇನು
ಹರಿಸುವದು ಒಲವು

ಬಂದು ಬಿಡು ಹತ್ತಿರ
ಉಸಿರಿಗುಸಿರು ತಾಗಿ
ಅರಳಲಿ ಎದೆಯ
ತೋಟದಲಿ ಕಮರದಾ..
ಕುಸುಮ

ನನ್ನೆದೆಯ ಮಿಡಿತ
ನಿನ್ನೆದೆಯ ಕಂಪನ
ಜೊತೆಗೂಡಿ ಮೀಟಲಿ
ಒಲವಿನ ವೀಣೆಯಾ..
ಹರಿದುಬಿಡಲಿ ಉಸಿರಿರುವತನಕ ಮಾಸದಾ…ಅಮರರಾಗ

—————————–

ಇಮಾಮ್ ಮದ್ಗಾರ

About The Author


Comments

Leave a Reply

You cannot copy content of this page