ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇಂದಿರಾ ಮೋಟೆಬೆನ್ನೂರ

ಸ್ನೇಹದ ಪರಿ

ಚಣ ಕಾಲ ಮೂಡಿ
ಮರೆಯಾದ ಮಳೆಬಿಲ್ಲ
ಎಳೆ ಬಣ್ಣ ತೆರದಿ..
ನಿನ್ನ ದರುಶನ…
ನಿನ್ನೊಲವ ಚೆಲುವ ಸ್ನೇಹ…

ಮೋಡದ ಮರೆಯ
ತಾರೆಗಳ ಕಂಗಳಲಿ
ಚಂದಿರ ಬೆಳದಿಂಗಳಲಿ
ಕಣ್ಣಾ ಮುಚ್ಚಾಲೆಯಂತೆ
ನಿನ್ನೊಲವ ಚೆಲುವ ಸ್ನೇಹ..

ಮತ್ತದೇ ಬೇಸರ
ಮತ್ತದೇ ದೂರ
ಪದೇ ಪದೇ ನಿರಾದರ
ಮತ್ತೆ ಮರುಕಳಿಸಿದ ನೋವಂತೆ
ನಿನ್ನೊಲವ ಚೆಲುವ ಸ್ನೇಹ…

ರಾತ್ರಿಯ ನೀರವತೆಯ
ತೇರಿನಲಿ ತೇಲಿ ಬಂದ
ಮಿನುಗು ಮಿಂಚುಳ್ಳಿ
ಬೆಳಕು ಮಾಯವಾದಂತೆ
ನಿನ್ನೊಲವ ಚೆಲುವ ಸ್ನೇಹ…

ಕಡು ಕತ್ತಲ ಹೊಳೆಯ
ಈಜಿ ಬಂದ ನಕ್ಷತ್ರದಂತೆ
ಇರುಳ ಕೊರಳಲಿ ಜೋತುಬಿದ್ದ
ಚಂದ್ರಮನ ಪ್ರೀತಿಯಂತೆ
ನಿನ್ನೊಲವ ಚೆಲುವ ಸ್ನೇಹ…

ತುಂಬಿ ಮೈದುಂಬಿ ದುಂಬಿ
ಮುತ್ತಿಟ್ಟು ಮರೆಯಾದಂತೆ..
ತೊರೆದು ಮರೆಯಾದ
ಇಬ್ಬನಿಯ ಸಿಹಿ ಬಿಂದುವಂತೆ..
ನಿನ್ನೊಲವ ಚೆಲುವ ಸ್ನೇಹ…

ಪ್ರತಿ ಕ್ಷಣ ಪ್ರತಿ ಘಳಿಗೆ
ಎಲ್ಲೆಡೆ…ಕಣ್ಣಾ ಮುಚ್ಚಾಲೆ
ಆಟದ ಪರಿಣಿತ ಆಟಗಾರ
ಮೋಡಿಗಾರ ಕನಸುಗಾರ…
ನಿನ್ನೊಲವ ಚೆಲುವ ಸ್ನೇಹ…

ಸುರಿವ ಮಳೆ ಹನಿಯ
ತೂರಿ ಬಂದ ರವಿ ಕಿರಣದಂತೆ…
ಬಿರಿವ ಮೊಗ್ಗೆ ಒಡಲ ಮಧು
ಮಕರಂದ ಹರಣದಂತೆ..
ನಿನ್ನೊಲವ ಚೆಲುವ ಸ್ನೇಹ…

ಇರುಳ ಕೈ ಬೆರಳ ಹಿಡಿದು
ನಡೆವ ಶಶಿ ಕಿರಣದಂತೆ….
ಸುರಿವ ಜಡೆ ಮಾಲೆ
ಹನಿಗವನ ವರುಣನಂತೆ..
ನಿನ್ನೊಲವ ಚೆಲುವ ಸ್ನೇಹ…


ಇಂದಿರಾ ಮೋಟೆಬೆನ್ನೂರ.

About The Author

7 thoughts on “ಇಂದಿರಾ ಮೋಟೆಬೆನ್ನೂರ ಸ್ನೇಹದ ಪರಿ”

  1. Indira Motebennur. Belagavi.

    ಮೀನಾಕ್ಷಿ ಮೇಡಂ …ತಮ್ಮ ಸ್ಪಂದನೆಗೆ ಆತ್ಮೀಯ ಧನ್ಯವಾದಗಳು…

  2. Indira motebennur.Belagavi

    *ಶಬ್ದಗಳಿಂದ ಅಲಂಕರಿಸಿರುವಿರಿ ಸ್ನೇಹವನ್ನು*
    ತಮ್ಮ ಈ ಸ್ಪಂದನೆಗೆ ಧನ್ಯವಾದಗಳು…
    (ತಮ್ಮ ಹೆಸರು ಇಲ್ಲ)

Leave a Reply

You cannot copy content of this page

Scroll to Top