ಕಾವ್ಯ ಸಂಗಾತಿ ಶಂಕರಾನಂದ ಹೆಬ್ಬಾಳ ಗಡಿಯಾರ ಎಲ್ಲ ದಿಕ್ಕುಗಳು ನನ್ನ ಸುತ್ತಲೂತಿರುಗುವುದೊಂದೆ ಕೆಲಸ ನನಗೆ, ಊರು ಬದುಕಿದರೇನು..?ಸತ್ತರೇನು..?ನಾನು ಮಾತ್ರ ತಿರುಗುತ್ತಲೆ ಇದ್ದೇನೆ..ಬೇಸರವಿರದ ಚಕ್ಕಡಿಯ ಗಾಲಿಯಂತೆ,ಹಾಸುಗಂಬಿಯ ಮೇಲೆ ಉರುಳುತ್ತಲೆಇದ್ದೇನೆ,ನಾನು ಜಗವ ನೋಡಿಲ್ಲಜಗವೇ ನನ್ನನ್ನು ದಿಟ್ಟಿಸುವಂತೆಮಾಡಿದ್ದೇನೆ…! ಕಾಯುವ ಪ್ರೇಮಿ ಶಪಿಸಿಬುಸುಗುಡುತ್ತಿದ್ದಾನೆ,ಹಾಳಾದ್ದು ಸಮಯ ಹೋಗುವುದೆ ಇಲ್ಲವೆಂದು,ಹಡೆದ ತಾಯಿಗೆ ಇದರದ್ದೆ ಚಿಂತೆಹೊತ್ತು ಹೊತ್ತಿಗೆ ಹೊಟ್ಟೆಗೆ ಹಾಕಬೇಕೆಂದುನೋಡುತ್ತಿದ್ದಾಳೆ,ಇನ್ನು ಸಮಯವಾಗಿಲ್ಲ….! ಇಲ್ಲೊಬ್ಬ,ನೌಕರಿಗೆ ಪರೀಕ್ಷೆ ಬರೆಯುತ್ತಿದ್ದಾನೆ,ವರ್ಷಗಟ್ಟಲೆ ಓದಿ ಗುಡ್ಡಹಾಕಿದ ಜ್ಞಾನಒರೆಗಚ್ಚಿ ಸಮಯ ನೋಡುತ್ತಲೆ ಇದ್ದಾನೆ,ಮೂಕ ಬಸವನಂತೆ,…! ಅಲ್ಲೊಬ್ಬ,ತಿರುಕ ಪುಡಿಗಾಸಿಗೆ ಅಲೆದುಸುಸ್ತಾಗಿ ನಡೆದು ಬೀದಿ ಬದಿಯಲ್ಲಿಹಣೆಬರಹವ ನೆನೆಯುತ್ತ,..!ನನ್ನ ಟೈಂ ಚೆನ್ನಾಗಿಲ್ಲ, ಇದ್ದರೆ ನಾನುಏನೋನೊ ಆಗುತ್ತಿದ್ದೆ ಎಂದುಕುಳಿದ್ದಾನೆ ಗೊಣಗುತ್ತ…!! ಒಳಿತು ಕೆಡಕಾಗಲು ಗಡಿಯಾರವೆಕಾರಣ ಜ್ಯೋತಿಷಿ ಹೇಳಿದ್ದು,,,!ಬೆಳಿಗ್ಗೆ ರಾಹುಕಾಲ, ಮಧ್ಯಾಹ್ನಯಮಗಂಡಕಾಲ, ಹತ್ತು ಹಲವುಗೋಜಲುಗಳ ಕಿರಿಕಿರಿ,ಎಲ್ಲವು ತರ್ಕಕ್ಕೆ ನಿಲುಕದ್ದು,..!! ಟ್ರೈನ್ ತಪ್ಪಿಸಿಕೊಂಡವನೊಬ್ಬಹಿಡಿಶಾಪ ಹಾಕಿದ್ದು ನನ್ನ ಟೈಂ ಸರಿಯಿಲ್ಲ,..!ಈಗಷ್ಟೆ ಟ್ರೇನ್ ಹೋಯಿತು,ತಪ್ಪು ಟ್ರೈನಿನದಲ್ಲಇವನದೆ ಎಂಬುದು ಗೊತ್ತಿಲ್ಲ,,,!! ಆದರೂ ಗಡಿಯಾರ ಯಾರು ಬೈದರೂ,ತಿರುಗುತ್ತಲೆ ಇದೆ ನಿಂತೆ ಇಲ್ಲ…!ಇದೊಂದು ಓಡುವ ಕುದುರೆಯಂತೆನಿಂತರೆ ಪ್ರಯೋಜನವಿಲ್ಲ…!! ಶಂಕರಾನಂದ ಹೆಬ್ಬಾಳ