ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶೃತಿ ಮೇಲ್ಸಿಮಿ

ಹನಿಗವನಗಳು

ಬಯಲು

ತಿನ್ನುವ ಬಯಕೆ ಇಲ್ಲ
ಬಯಸುವ ಆಸೆ ಉಳಿದಿಲ್ಲ
ಬೇಡುವ ಮೋಹ ತೊಲಗಿತಿಂದು
ಬಟ್ಟ ಬಯಲಾದ ಬಯಲಿನಲಿ
ಬಯಲಾಗುವುದೊಂದೆ ದಿಕ್ಕನಗಲಿ …

ಬದಲಾವಣೆ

ಈಗ ಎಲ್ಲವೂ ಬದಲಾಗಿದೆ
ಕಾರಣ ಅದಕ್ಕೆ
ಮೊದಲಿನಂತೆ ಯಾವುದು
ಇಲ್ಲದಿರುವುದು…

ಬಯಕೆ

ಭೋಗದ ಬಯಕೆ ಇಲ್ಲ
ಬಯಸುವ ಆಸೆ ಉಳಿದಿಲ್ಲ
ಬೇಡುವ ಮೋಹ ತೊಲಗಿತಿಂದು
ಎನ್ನ ಮನದ ಭ್ರಮೆ ಮತಿಸಿ
ನಿನ್ನ ಹೃದಯದಲಿ ನಾ ಸೇರಿದೇನಿಂದು

ತೊಳಲಾಟ
ಎನ್ನ ಮನದ ತೊಳಲಾಟದ
ಅಲೆಗಳೇಳು ಕಲ್ಲ ಎಸೆದು
ತೆಪ್ಪವನತ್ತಿ ದಡ ಸೇರಲು
ಕೈ ಚಾಚುತಲಿರುವೆ…
ಕರವ ನಂಬಿ ನಾ ದೋಣಿ ಎರಲೇ ?
ನದಿಯಲೇ ಈಜಿ ಅಲೆಗಳ ಪ್ರವಾಹ
ತಡೆದು ನಿಲ್ಲಿಸಲೇ ?

ಓಕಳಿ

ಬಣ್ಣ ಬಣ್ಣ ಮೋರೆ
ಹಿಗ್ಗಿ ಹಿಗ್ಗಿ ಬಾಚಿ
ತಬ್ಬಿಕೊಂಡು ನಗುತಲಿದ್ದವು
ಓಕಳಿಯ ಹೊಳೆಯಲಿ

ಹಾದಿಗಲ್ಲು

ನಮ್ಮ ಹಾದಿಯ ಕಲ್ಲನು
ಜೀವನದುದ್ದಕ್ಕೂ ನಾವೇ ಹೊರಬೇಕಿದೆ
ನಮಗಾಗಿ ದಾರಿ ರೂಪಿಸಲು
ನಮ್ಮ ಧೈರ್ಯಕೆ ನಾವೇ ಹೆಗಲಾಗಲು
ನಮ್ಮ ಕನಸುಗಳೇ ನಮಗೆ ಆಸರೆಯಾಗಲು..

ಪರದೇಶಿ

ತಾನು ತನ್ನದನ್ನೆವುದನು ಬಿಟ್ಟಿರಲಾರದವ
ಪರರೊಳಿತಿಗಾಗಿ ಮಾಡುವನೇನು ?
ಪರರ ಕೆಡುಕ ಬಯಸಿ
ಮನೆಯ ತಾರಸಿನ ಮೇಲೆ ಕೂತರೇನು?

ಪರರ ಹಿತಕಾಗಿ ನಡೆದರೆ
ಪರದೇಶಿ ಎನ್ನುವರು
ಒಳ್ಳೆಯತನವ ಹುಡುಕ ಹೋದರೆ
ಹಾಲಿನಲಿ ಬೆರೆತ ನೀರಿನಂತೆ ಈ ಕಲಿ ಕಾಲದಲಿ

ನಮ್ಮ ಮತ

ಬನ್ನಿ ನಾಡಿನ ಭಾವಿ ಪ್ರಜೆಗಳೇ
ನಿಮ್ಮ ನಿಮ್ಮ ಮತಗಟ್ಟೆಗಳಿಗೆ
ಹಾಕಿರಿ ವೋಟು
ತೆಗೆದುಕೊಳ್ಳದೆ ನೋಟು

ಪಕ್ಷದ ಗುರುತು ನೋಡದೆ
ಉತ್ತಮ ವ್ಯಕ್ತಿಗಳಿಗೆ
ಒತ್ತಿರಿ ನಿಮ್ಮಯ ವೋಟು
ಮಾರಿ ಕೊಳ್ಳದೆ ನಿಮ್ಮತನವನು

ಪ್ರೀತಿ

ಕೇಳಿ ಪಡೆಯುವುದಕ್ಕೆ
ವಸ್ತುವಲ್ಲ ಈ ಪ್ರೀತಿ …
ಇಷ್ಟ ಪಟ್ಟು ಬದುಕು ಹಂಚಿಕೊಳ್ಳಬೇಕು
ನಮಗೆ ಬಂದ ರೀತಿ…..

ಬದಲಾವಣೆ

ಈಗ ಎಲ್ಲವೂ ಬದಲಾಗಿದೆ
ಕಾರಣ ಅದಕ್ಕೆ
ಮೊದಲಿನಂತೆ ಯಾವುದು
ಇಲ್ಲದಿರುವುದು


ಶೃತಿ ಮೇಲ್ಸಿಮಿ

About The Author

1 thought on “ಶೃತಿ ಮೇಲ್ಸಿಮಿ-ಹನಿಗವನಗಳು”

Leave a Reply

You cannot copy content of this page

Scroll to Top