ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ-

ಗಝಲ್

ಬಚ್ಚಿಟ್ಟ ಸಾವಿರ ನೆನಪು ಪ್ರೀತಿಯಲಿ ಹೇಳುವೆನು ಕಿವಿಯಾಗುವೆಯಾ ಒಡೆಯಾ
ಹುದುಗಿದ ಪ್ರೇಮವ ಎಳೆಎಳೆಯಾಗಿ ಒಪ್ಪಿಸುವೆ ಧನಿಯಾಗುವೆಯಾ ಒಡೆಯಾ/

ಕಣ್ಣಂಚಲಿ ನಿಂದು ತುಳುಕುತಿಹ ನೊಂದ ಕಣ್ಣೀರಿನನಿಗಳು
ವಿರಹ ವೇದನೆಯ ಬಿಚ್ಚಿಡುವೆ ಒಪ್ಪಿಸಿಕೊಳ್ಳುವೆಯಾ ಒಡೆಯಾ//

ಜನುಮ ಜನುಮದ ಪ್ರೀತಿಯಿಂದಾಡಿದ ಪಿಸು ಮಾತುಗಳು
ತುಟಿಯಂಚಲಿ ಮನೆಮಾಡಿಹವು ಜೇನಸವಿಯುತ ತನಿಸುವೆಯಾ ಒಡೆಯಾ//

ಮನವು ತಲ್ಲಣದಿ ಕಂಪಿಸುತಿದೆ ತುಂಬಿ ನಿನ್ನ ನೆನಪುಗಳು
ಹೃದಯದ ಭಾರವಾ ಕೆಳಗಿಳಿಸಲು ಕೈಜೋಡಿಸುವೆಯಾ ಒಡೆಯಾ//

ಮಧು ತುಂಬಿದ ಹೂವಂತೆ ನಿನಗಾಗಿ ಕಾತರಿಸುತಿರುವೆ
ಪರಾಗಗಳ ಸ್ಪರ್ಶಿಸುತಲಿ ಹಿತನೀಡಿ ಮಿಡಿತಗಳ ಮೇಳೈಸುವೆಯಾ ಒಡೆಯಾ//

ಸರಸ ಸಲ್ಲಾಪಕೆ ಹಾತೊರೆಯುತ ಸವಿಗಳಿಗೆಗಳಾ ನಿರೀಕ್ಷೆಗಳಲಿ ಕಾದು
ಕಾತರಿಸುತಿರುವೆ ಪ್ರೀತಿ ಪ್ರಲಾಪದಿ ಒಂದಾಗುವೆಯಾ ಗೆಳೆಯಾ//

ಎದೆಗೊರಗಿ ಅತ್ತು ಅನುಳ ಮನವನು ಹಗುರಾಗಿಸುವ ಗಳಿಗೆಗಳು
ಎದುರು ನೋಡಿ ಸೋತಿದೆ ತೋಳಲಿ ಸೆರೆಯಾಗಿಸಿ ಇಟ್ಟುಕೊಳ್ಳುವೆಯಾ ಗೆಳೆಯ//


ಡಾ ಅನ್ನಪೂರ್ಣ ಹಿರೇಮಠ

About The Author

2 thoughts on “ಡಾ ಅನ್ನಪೂರ್ಣ ಹಿರೇಮಠ-ಗಝಲ್”

  1. ವಿರಹಿಯ ವೇದನೆಯು ದನಿಯಾಗಿ ತೊಟ್ಟಿಕ್ಕಿವೆ ಹನಿಹನಿಯಾಗಿ ಗಝಲ್ ನ ಸಾಲುಗಳಲ್ಲಿ…

Leave a Reply

You cannot copy content of this page

Scroll to Top