ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಲಹರಿ ಸಂಗಾತಿ

ಜ್ಯೋತಿ ನಾಗೇಶ್ ಲಹರಿ

ಹಿಮ

ಎಷ್ಟೊಂದು ಸೌಮ್ಯವಾದ ಹೆಸರೇ ನಿಂದು…. ಯಾರಿಟ್ಟರೇ ಆ ಹೆಸರನ್ನು ನಿನಗೆ….
ದಿನಕ್ಕೆ ಸಾವಿರ ಸಲ ಕರೆದಾಗ ಎಷ್ಟೊಂದು ಸಾಫ್ಟ್ ಆಗಿ ಕರೀತಿಯೋ…. ನೀನು ಕರೆದಾಗೆಲ್ಲ ಎದೆಯಲ್ಲಿ ಏನೋ ಒಂತರ ರೋಮಾಂಚನ… ನನ್ ಹೆಸರು ಇಷ್ಟೊಂದು ಫೀಲ್ ಕೊಡುತ್ತ ಅಂತ ನೀನು ಕರೆದಾಗಲೇ ಅನಿಸಿದ್ದು ಕಣೋ ಅಂತ ನೀನು ನಾಚಿ ಹೇಳ್ತಾ ಇದ್ರೆ….. ನಿಜವಾಗಿಯೂ ಹಿಮ….. ಆ ಕೆಂಪಾದ ತುಟಿ ಗಳು ಚಿಟ್ಟೆ ಯ ರೆಕ್ಕೆ ಯಂತೆ ಬಡಿದು ಕೊಳ್ಳೋದು ನೋಡೋದ್ರಲ್ಲೇ ನಾನು ಕಳೆದು ಹೋಗ್ತಿದ್ದೆ…
ಏನೋ ಗೊತ್ತಿಲ್ಲ ಕಣೇ…. ಲವ್ in ಫಸ್ಟ್ sight ಅಂತಾರಲ್ಲ….. ಅದು ನನ್ ಜೀವನ ದಲ್ಲೂ ನಡೆಯುತ್ತೆ ಅಂತ ಅನ್ಕೊಂಡಿರಲಿಲ್ಲ… ಅದರಲ್ಲೂ ಎಲ್ಲಿಂದಲೋ ಈ ಮಾಯನಗರಿಗೆ ಬಂದ ಈ ನತದೃಷ್ಟ ನ ಜೀವನ ದಲ್ಲಿ ಇದೆಲ್ಲಾ ಕನಸು ಅಲ್ವೇನೇ….
ಬೆಳಿಗ್ಗೆ ಎದ್ದು…. ನಾನು ಪೇಪರ್ ಓದದೇ ಇದ್ರು ಓದುವವರ ಮನೆ ಬಾಗಿಲಿಗೆ ಪೇಪರ್ ತಲುಪಿಸಿ ವಾಪಾಸ್ ರೂಮ್ ತಲುಪಿ ಸ್ನಾನ ದ ಶಾಸ್ತ್ರ ಮುಗಿಸಿ ಮತ್ತೆ ಯಾರನ್ನೋ ಕಾಡಿ ಬೇಡಿ ಗಿಟ್ಟಿಸಿಕೊಂಡ ಒಂದು ಚಿಕ್ಕ ಕೆಲಸ ಪೂರೈಸಿ ಸಂಜೆ ಪಕ್ಕದಲ್ಲೇ ಹನುಮಂತನ ಗುಡಿಯಲ್ಲಿ ಕೊಡೋ ಒಂದಿಷ್ಟು ಪ್ರಸಾದ ಹೊಟ್ಟೆಗಿಳಿಸಿದ್ರೆ ಒಂದು ಮಟ್ಟಿಗೆ ಸಮಾಧಾನ..  ಅಲ್ಲಿಂದ ಮತ್ತೆ ಅಲ್ಲೇ ಹತ್ತಿರ ಇದ್ದ ರೈಲ್ವೆ ಸ್ಟೇಷನ್ ನಲ್ಲಿ ರಾತ್ರಿ 12ವರೆಗೂ ಕಾಫಿ ಟಿ ನೀರಿನ ಬಾಟಲ್ ಹೀಗೆ ಏನಾದ್ರು ಮಾರಿ ಸಿಕ್ಕ ಒಂದಿಷ್ಟು ಹಣ ತಗೊಂಡು ರೂಮಿಗೆ ಬಂದು ನನ್ ಕಾಯೋ ಹನುಮಪ್ಪನ ಫೋಟೋ ಹಿಂದೆ ಇಟ್ಟಿರೋ ಡಬ್ಬಿಗ್ ಹಾಕೋವಾಗ ಅವಳದೇ ನೆನಪು ಕಣೇ..   ಅವಳೇ ನನ್ನ ಹೆತ್ತಮ್ಮ….
ಇಷ್ಟೆಲ್ಲಾ ಹೋರಾಟ ಅವಳಿಗೋಸ್ಕರ….
ಹೂವಿನಂತವಳು…
ಹೂ ಮಾರಿಯೆ ಜೀವನ ಸಾಗಿಸಿಸುತಿದ್ಲು….
ಮನೆ ಹಿತ್ತಿಲ ಹೂವನ್ನು ಕಿತ್ತು ಕಟ್ಟಿ… ಮಾರೋವಾಗೆಲ್ಲ  ಅವಳು ಬಯಸಿದ್ದು ಒಂದೇ ಕಣೇ…. ಹೂವಿನಂತ ನಗುವನ್ನು ತನ್ನೆರಡು ಕುಡಿಗಳಲ್ಲಿ ಕಾಣಬೇಕು ಅಂತ…. ಆದ್ರೆ….. ಅವಳಾಸೆ ಪೂರೈಸೋಕೆ ಮೇಲೆ ಇರುವವನ ಒಪ್ಪಿಗೆ ಬೇಕು ಅಲ್ವೇನೇ…. ಅದು ಮಾತ್ರ ಅವಳಿಗೆ ಸಿಗಲೇ ಇಲ್ಲ…
ಆಗ ನಾನಿನ್ನು puc ಸಹ ಮುಗಿಸಿರಲಿಲ್ಲ…
ಅವತ್ತು ಒಂದಿನ ಬೆಳ್ಬೆಲ್ಗೆ ಹೂ ಕೀಳೋಕೆ ಅಂತ ಹಿತ್ತಲಿಗ್ ಹೋದ ಅಮ್ಮ ಎಚ್ಚರ ತಪ್ಪಿ ಬಿದ್ಲು…. ಪಕ್ಕದಲೇ ಇದ್ದ ಗವರ್ನಮೆಂಟ್ ಹಾಸ್ಪಿಟಲ್ ಡಾಕ್ಟ್ರ್ ಅಮ್ಮನ ಮೆಡಿಸಿನ್ ಬರೆದ್ ಕೊಡ್ತಾ ಹೇಳಿದ್ರು….. ಹುಷಾರಾಗಿ ನೋಡ್ಕೋ ಪಾ ಅಮ್ಮನ ಇನ್ಮೇಲೆ…. ಅಮ್ಮ ದುಡಿದದ್ದ್ ಸಾಕು…. ಇನ್ಮೇಲೆ ಸ್ವಲ್ಪ ರೆಸ್ಟ್ ಕೊಡು ಅಂತ ಹೇಳಿ ರಿಪೋರ್ಟ್ ಕೈಲಿಟ್ಟರು. ಜೀವನ ದಲ್ಲಿ ಮೊದಲನೇ ಶಾಕ್ ಅವತ್ತೇ ಆಗಿದ್ದು.. ಹಿಮ….
ಅಮ್ಮನಿಗೆ ಕ್ಯಾನ್ಸರ್…. ಎರಡನೇ ಹಂತದಲ್ಲಿದೆ….
ಆಗಿನ್ನೂ sslc ಓದುತ್ತಿದ್ದ ತಂಗಿಯ ಹೆಗಲಿಗೆ ಅಮ್ಮನನ್ನು ಒಪ್ಪಿಸಿ… ಅವರಿಬ್ಬರ ಜವಾಬ್ದಾರಿ ಹೊತ್ತು ಅಂದೇ ನಮ್ಮೂರ ಬಸ್ಟಾಪ್ ನಲ್ಲಿ ಬೆಂಗಳೂರು ಬಸ್ ಹತ್ತಿದವನು ಕಣೇ ನಾನು….ಇಲ್ಲಿವರೆಗೂ ತಂದು ನಿಲ್ಲಿಸಿದೆ ಜೀವನದ ಪ್ರಯಾಣ…
ಎಂದಿನಂತೆ ಅವತ್ತು ಸಹ ನನ್ ಮಾಮೂಲಿ ಕೆಲಸ ಪೇಪರ್ ಹಾಕೋವಾಗ ಬೀದಿಯ ಕೊನೆ ಮನೆಯ ಮಹಡಿಯಲ್ಲಿ ಕಂಡವಳು ನೀನು…. ಕಂಡ ಕೂಡ್ಲೇ ನನ್ನವಳೇ ಇವಳು ಅಂತ ಅನಿಸಿದಂತೂ ಸುಳ್ಳಲ್ಲ….. ಅಸ್ಟೊತ್ತಿಗಾಗಲೇ ಒಳಗಿಂದ ಹಿಮ… ಅಂತ ಒಂದು ಹೆಣ್ಣು ದ್ವನಿ…. ನೀನು…… ಅಷ್ಟಕ್ಕೇ ಜಿಂಕೆಯಂತೆ ನೆಗೆದು ಒಳಗೆ ಹೋದೆ….. ಮಾಡೋ ಕೆಲಸ ಮರೆತು ನಿನ್ನನೇ ನೋಡೋತ್ತ ನಿಂತ ನನ್ನೆದೆಯಲ್ಲಿ ಅಂದೇ ಅಚ್ಚಾಯ್ತು….. ನಿನ್ನವಳ ಹೆಸರು ಹಿಮ…..
ಅಷ್ಟ್ ಸುಲಭವಾಗಿ ನೀನು ಎಲ್ಲಿ ಸಿಕ್ಕೇ ಹಿಮ……

ನಿನ್ನ ಮಾತಾಡಿಸೋಕೆ ನಾನು ಕಳೆದದ್ದ್ ಅದೆಷ್ಟು ಮಾಸಗಳೋ….. ಕೊನೆಗೂ ಆ ದಿನ ಬಂತು… ನೀ ನನ್ನೊಂದಿಗೆ ಮಾತನಾಡಿದ ಮೊದಲ ದಿನ ನಿನ್ನ ಕಣ್ಣಲ್ಲಿ ಕಂಡ ಹೊಳಪು…. ನನ್ನೊಲವಿಗೆ ನೀ ಕೊಟ್ಟ ಸಮ್ಮತಿ ಯಂತೆ ಇತ್ತು….
ಹೇಳು ಹಿಮ…. ನಾನು ಯಾಕೆ ನಿಂಗಿಷ್ಟ ಅಂತ ಕೇಳಿದಾಗೆಲ್ಲ…. ಒರಟು ಗಡ್ಡದಲ್ಲಿ ಕೈಯಾಡಿಸುತ್ತ… ಹೆ ಶಶಿ… ಯಾವಾಗ್ಲೋ ನಮ್ಮಮ್ಮನ ಕಣ್ತಪ್ಪಿಸಿ ನನ್ನ ಓಡಿಸ್ಕೊಂಡು ಹೋಗ್ತಿಯ ಅಂತ ತಮಾಷೆ ಮಾಡಿ ಮಾತು ಮರೆಸ್ತಿದ್ದೆ…
ಆದ್ರೆ ಹಿಮ… ಇವತ್ತು ರೂಮಿಗೆ ಬಂದಾಗ ಕಿಟಕಿಯಿಂದ ಒಳಗೆ ಬಿದ್ದ ಕಾರ್ಡನ್ನು ನೋಡಿದಾಗಲೇ ಗೊತ್ತಾಗಿದ್ದು…. ನನ್ನ ಹಿಮ ಸೂರ್ಯನ ಕಿರಣಕ್ಕೆ ಕರಗಿದೆ ಅಂತ….. ನಾ ಕೆಲಸ ಮಾಡೋ ಆಫೀಸ್ ನ ಮ್ಯಾನೇಜರ್ ಅಶ್ವಥ್ ಕಿರಣ್ ಜೊತೆ ನಿನ್ನ ಮದುವೆ ಅಂತ…. ಇದು ನನ್ನ ಜೀವನ ದ ಎರಡನೇ ಶಾಕ್ ಹಿಮ….

ಕೊಳ್ಳುವ ಮುನ್ನ
ತಿಳಿದಿಲ್ಲ ಮಲ್ಲಿಗೆಗೆ…
ಮುಡಿಗೋ ಮಸಣಕೋ ಎಂದು….
ನಗುತ
ಏರಿದ
ಮುಡಿಯಲ್ಲೂ
ಮೂಡಿದೆ
ಮಸಣದ ಛಾಯೆ
ನೀ ಎದ್ದು ಹೋದ ಮರುಕ್ಷಣದಲಿಂದು..
.
ಚೇತರಿಸಿ ಕೊಳ್ಳಲಾಗದಷ್ಟು ಪಾತಾಳಕ್ಕೆ ಇಳಿದೆ….
ಆದ್ರೆ ಪ್ರೀತಿಸಿದ ಹೃದಯ ಕಣೇ ಇದು…. ಎಂದೂ ಶಪಿಸದು….. ಈಗ್ಲೂ ಹೇಳುತ್ತೆ… ಹಿಮ ನಿನ್ನವಳು… ಮೃದು ಮನದವಳು ಅಂತ….
ಅದೇ ಆಶಯದಲ್ಲಿ ಎದೆಯಲ್ಲಿ ನೀ ಬಿಡಿಸಿದ ರಂಗೋಲಿಗೆ ಪ್ರತಿದಿನ ನಿನ್ನೆಸರಿನ ರಂಗನ್ನು ತುಂಬಿ ಕಾದಿರುವೆ…..
ಎಂದಾದ್ರೂ ಒಮ್ಮೆ ಅದೇ ಹೊಳಪು ಕಂಗಳಿಂದ ಅದೇ ಮಹಡಿಯ ಮೇಲೆ ಕಾಯ್ತಿಯ ಹಿಮ…..
ನಿನ್ನದೇ ನಿರೀಕ್ಷೆಯಲ್ಲಿ… ನಾನು….


About The Author

1 thought on “ಜ್ಯೋತಿ ನಾಗೇಶ್ ಲಹರಿ-ಹಿಮ”

Leave a Reply

You cannot copy content of this page

Scroll to Top