ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಮೀದಾ ಬೇಗಂ ದೇಸಾಯಿ-

ಯಾರಿಗೆ ಹೇಳಲಿ…?

ಹಸಿದವರ ಕೈ ತುತ್ತು
ಕಸಿಯುವವರ ಬಲ್ಲೆ
ನೆರಳಿನ ಸೂರುಗಳನು
ತೂರಿ ಎಸೆಯುವವರ ಬಲ್ಲೆ ..

ಆದರೆ…
ಯಾರಿಗೆ ಹೇಗೆ ಹೇಳಲಿ ?
ಯಾರಿಗೆ ದೂರು ಕೊಡಲಿ ಇವೆಲ್ಲ ?
ರಕ್ಷಕರೇ ಭಕ್ಷಕರಾದಾಗ ,
ನೆರಳು ನೀಡಿದವರು
ಕೊರಳು ಕೊಯ್ವಾಗ ,
ನಯವಂಚಕ ತೋಳಗಳೆಲ್ಲ
ಎಂಜಲಿಗೆ ಕೈ ಚಾಚುವಾಗ….!

ಹಗಲು ಸವಲತ್ತುಗಳ ನೀಡಿ
ಕತ್ತಲೆಯಲಿ ಕಿತ್ತುಕೊಂಡಾಗ ,
ನಂಬಿಕೆಯ ಹಾರ ಹಾಕಿದವಗೇ
ನೇಣು ಬಿಗಿಯುವಾಗ ,
ತಾಯಂದಿರೇ ಎಂದುಲಿದು
ಕಳ್ಳ ಸಂಗಕ್ಕೆ ಜೊಲ್ಲು ಸುರಿಸಿದಾಗ…

ಯಾರಿಗೆ ಹೇಳಲಿ ನಾನು..?
ಸತ್ಯವಾಗಿಯೂ ನೀನಿರುವುದಾದರೆ ದೇವಾ
ತೆರೆ ಬೇಗ ನಿನ್ನ ಆ
ಬೆಂಕಿ ಕಾರುವ ಕೆಂಗಣ್ಣನು….!


ಹಮೀದಾ ಬೇಗಂ ದೇಸಾಯಿ

About The Author

Leave a Reply

You cannot copy content of this page

Scroll to Top