ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಬಾರದ ನಿದಿರೆ

Colorful digital painting of man hugs her woman from behind.

ಕಣ್ಣು ಮಂಜಾಗಿ ಆಸೆ ಕುರುಡಾಗಿ
ಹಂಬಲದ ಕೊಳವಿಂದು ಬತ್ತಿ
ಮನ ಮಂದಾರ ಬಾಡಿ ಬಾಡಿ
ಬಿರು ಬಿಸಿಲಲಿ ಲತೆ ಒಣಗಿದ ತೆರದಿ
ಜೀವವಿಂದು ನೊಂದು ಬೆಂದು
ನವಿರಾದ ಪ್ರೀತಿಯ ನೆನೆದು ನೆನೆದು//

ಹಸಿವು ದೂರಾಗಿ
ನಿದಿರೆ ಬಾರದಾಗಿ ಬೀಸಿ ಬರುವ
ತಂಗಾಳಿಯಲೂ ಬಿಸಿಲು ನನ್ನ ಸುಟ್ಟಂತೆ
ದಿಕ್ಕು ಕಾಣದಾಗಿ ಮನ. ಒದ್ದಾಡಿ
ಸುಳಿವ ಆಸೆಗಳು ಮರುಗಿ
ಉಸಿರಿಂದು ಬೆಂದು ಬೆಂದು
ಸವಿಯಾದ ಪ್ರೇಮವ ನೆನೆದು ನೆನೆದು//

ನೆನಪಿನಲಿ ಹನಿಗೂಡಿದ
ಕಣ್ಣೀರಿನ ಬಿಂದುಗಳು
ನುಡಿಸುತಿವೆ ವಿರಹರಾಗ ನಿಲ್ಲದೆ
ತನುವ ಮೀಟಿ ಮೀಟಿ
ಅಂತರಾಳವ ಹೆಕ್ಕಿ ಹೆಕ್ಕಿ
ಭಾವ ಬಿಂದಿಗೆ ಇಂದು ಸುಂದು
ಸೊಗಸಾದ ಒಲವ ನೆನೆದು ನೆನೆದು//

ಹಂಬಲ ದಿಕ್ಕು ಕಾಣದೆ ಹಲಬುತಿದೆ
ಬಯಕೆ ಬೆಂಗಾಡಲಿ ಅಲಿಯುತ
ಭ್ರಮೆಯೋ ಕನಸೊ ಅರಿಯದೆ
ಬೆಂಬತ್ತಿ ಸುಸ್ತಾಗಿದೆ ಎಂದು
ಒಡಲೊಳಗೆ ಮಿಂದು ಮಿಂದು
ಸುರಿವ ಸೋನೆಯಂದದ ಅನುರಾಗ ನೆನೆದು ನೆನೆದು//


ಡಾ ಅನ್ನಪೂರ್ಣ ಹಿರೇಮಠ

About The Author

2 thoughts on “ಡಾ ಅನ್ನಪೂರ್ಣ ಹಿರೇಮಠ ಬಾರದ ನಿದಿರೆ”

Leave a Reply

You cannot copy content of this page

Scroll to Top