ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸೊರಗುತ್ತಿದೆ ಮೂಗು

ಸುವಿಧಾ ಹಡಿನಬಾಳ

ಮೂಗುತಿಯ ಭಾರದಿಂದ
ಸೊರಗುತ್ತಿದೆ ಮೂಗು
ಯೋಜನೆಗಳ ಭಾರದಿಂದ
ನಲುಗುತ್ತಿದೆ ಗುಣಮಟ್ಟ

ಯೋಜನೆ ರೂಪಿಸುವವರು
ಹಾರುತ್ತಿರುವರು ಬಾನಂಗಳದಲ್ಲಿ
ವಾಸ್ತವ ರೆಕ್ಕೆ ಬಡಿಯಲಾಗದು
ತಳಮಟ್ಟದ ಜಂಜಾಟದಲ್ಲಿ

ಏಸಿ ರೂಮಿನಲ್ಲೇನು
ಧಗೆಯ ಹೊಗೆ ? ಆದರಿಲ್ಲಿ
ಮೇಲೇಳಲಾಗದ
ವಿಡಂಬನ ನಗೆ

ಬೇಕಿಲ್ಲ ಯಾರಿಗೂ
ಕೆಲಸದ ಗುಣಮಟ್ಟ
ತಟ್ಟಿ ಬಡಿದು ಬೆದರಿಸುವ
ಪರಿಗೆ ಬಂದಿದೆ ಸಂಕಷ್ಟ

ಇಂದೀಗ ಶಿಕ್ಷಕ ಶಿಕ್ಷಕನಲ್ಲ
ಬಹುವಿಧದ ಪರಿಚಾರಕ
ಹತ್ತಾರು ಯೋಜನೆ ಸುತ್ತೋಲೆ
ತಲೆ ತಿರುಗುತ್ತದೆ ಗಿರಿಗಿಟ್ಟಲೆ

ಸರ್ಕಾರಿ ಯೋಜನೆಗಳೇನೊ
ಮೇಲ್ನೋಟಕ್ಕೆ ಅತ್ಯುತ್ತಮ
ವಾಸ್ತವದ ಅರಿವಿರದ ಬರೀ ಲೆಕ್ಕ
ಕಾಗದ ಪತ್ರಗಳಲಿ ಎಲ್ಲಾ ಪಕ್ಕಾ!

ಇಲ್ಲಿ ಬಾಣೆಲೆಯಲ್ಲೇ ಹೆಗ್ಗಣ
ಸತ್ತುಬಿದ್ದಿದೆ ಎತ್ತುವವರಿಲ್ಲ
ಬದಲಿಗೆ ಹೊಸ ಹೊಸ ಯೋಜನೆಗಳ
ಭೂರೀ ಭೋಜನದ ತಯಾರಿ!

ಯಾರಿಗೆ ಬೇಕಿದೆ ಗುಣಮಟ್ಟ?
ಎಲ್ಲರಿಗೂ ಗೊತ್ತು ಇವೆಲ್ಲ
ಕಾಗದ ಪತ್ರಗಳಲಿ ಹುಲಿ
ತಮ್ಮ ‌ತಲೆಗೆ ಪಗಡೆ ಕಟ್ಟಲಷೈ


ಸುವಿಧಾ ಹಡಿನಬಾಳ

About The Author

1 thought on “ಸೊರಗುತ್ತಿದೆ ಮೂಗು ಕವಿತೆ-ಸುವಿಧಾ ಹಡಿನಬಾಳ”

Leave a Reply

You cannot copy content of this page

Scroll to Top