ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಶ್ಯಾಮ್ ಪ್ರಸಾದ್ ಭಟ್.

ಜವಾಬ್ದಾರಿ ಹೊತ್ತ ಕ್ರಿಯಾಶೀಲ ವಿಕ್ರಮ

ಭಾಮಿನೀ ಷಟ್ಪದಿಯಲ್ಲಿ

ಇಳೆಯ ಕೊಂಡಿಯ ಕಳಚಿ ಹಾರುತ/
ಹಲವು ದಿನಗಳ ಪಯಣ ಮುಗಿಸಿದ/
ಬಳಲಿಕೆಯತಾ ಮರೆತು ಬಿಟ್ಟನು ಧೀರ ವಿಕ್ರಮನು/
ಗುಳಿಗಳಿಲ್ಲದ ಜಾಗ ಗುರುತಿಸಿ/
ಚಲನೆ ವೇಗವ ಕಡಿತ ಗೊಳಿಸಿದ/
ಗೆಲುವ ನಗೆಯನು ಬೀರಿ ಗೈದನು *ಪಾದಸ್ವರ್ಶವನು/

ಖನಿಜ,ನೀರಿನ ಬಗೆಗೆ ಮಾಹಿತಿ/
ಮನುಜ ಲೋಕದ ಕಡೆಗೆ ಕಳುಹಿಸಿ/
ಮನನ ಮಾಡಲು ನೆರವು ನೀಡುವ ಬಯಕೆಯುಳ್ಳವನು/
ಕನಕ,ಕಬ್ಬಿಣದದಿರ ಜೊತೆಜಲ/
ಜನಕವಿಹುದೋ ತಿಳಿಯಬೇಕಿದೆ/
ಕನಸ ಕೆದಕುವ ಕೆಲಸ ಮಾಡುವ ಹೊರೆಯ ಹೊತ್ತವನು/


ಶ್ಯಾಮ್ ಪ್ರಸಾದ್ ಭಟ್.

About The Author

Leave a Reply

You cannot copy content of this page

Scroll to Top