ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರಭಾವತಿ ಎಸ್ ದೇಸಾಯಿ

ಗಜಲ್

ನಿನ್ನ ಸಾಂಗತ್ಯದಲಿ ಮನ ಅರಳಿ ಹೂವಾಗಿದೆ ದೊರೆ
ನಿನ್ನ ಕರುಣೆಯಲಿ ಮಿಂದ ಪ್ರಕೃತಿ ಚೆಲುವಾಗಿದೆ ದೊರೆ

ನಸುಕಿನ ಹೊಂಬೆಳಕಲಿ ಹಕ್ಕಿಗಳ ಗಾನ ಕೇಳುತಿದೆ
ನಿನ್ನಂಗ ಸೌರಭದಿ ಸೃಷ್ಟಿ ವಿಕಸಿತವಾಗಿದೆ ದೊರೆ

ಒಲವ ಮಳೆಗೆ ಧಾರಿಣಿ ಹಸಿರುಟ್ಟು ಸಂಭ್ರಮಿಸುತಿಹಳು
ನಿನ್ನ ದಿವ್ಯ ದೃಷ್ಟಿಯಲಿ ಜಗವು ಅಂದವಾಗಿದೆ ದೊರೆ

ಹೃದಯದಿ ಹುಟ್ಟಿದ ಭಾವ ಹುಚ್ಚು ಹಿಡಿಸಿದೆ ನಿತ್ಯವೂ
ನಿನ್ನಲ್ಲಿ ನೆಟ್ಟ ನೋಟ ಮುಂದೆ ಚಲಿಸದಾಗಿದೆ ದೊರೆ

ಅಷ್ಟಯೋಗವ ತಿಳಿಸಿ ಎನ್ನ ಕಣ್ಣು ತೆರೆಸಿದೆ ಇಂದು
ನಿನ್ನ ಭಜಿಸುತಾ ಪ್ರಭೆಯ ಹೊಳಪು ಬಯಲಾಗಿದೆ ದೊರೆ


ಪ್ರಭಾವತಿ ಎಸ್ ದೇಸಾಯಿ

About The Author

2 thoughts on “ಪ್ರಭಾವತಿ ಎಸ್ ದೇಸಾಯಿಯವರ ಗಜಲ್’”

  1. ಪ್ರಕಾಶ ಸಿಂಗ್ ರಜಪೂತ

    ಒಳ್ಳೆಯ ಗಡಸು ಹಾಡಗಬ್ಬಗಜಲು
    ಕಂಠ ಸೇರಲು ಆತುರ ಮೌನ ಹಬ್ಬ ಗಜಲು

Leave a Reply

You cannot copy content of this page

Scroll to Top