ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಕನ್ನಡಿಗರ ಹೃನ್ಮನ

ಕುವೆಂಪು ನೀವು ಬರೆದಿರಿ ಕನ್ನಡದೀ
ಇಪ್ಪತ್ತಮೂರು ಕವನ ಸಂಕಲನ
ಮೆರೆದಾಡಿದವು ಕಬ್ಬಿಗರ
ಸಾಹಿತ್ಯದಂಕಣ
ಕೊಳಲು ನುಡಿಸಿದಿರಿ
ಮೊಳಗಿತು ಕನ್ನಡದ
ಪಾಂಚಜನ್ಯ ಪಕ್ಷಿಕಾಶಿ
ಕುಣಿಯಿತು ಶಬ್ದ ದರ್ಪಣದಿ
ನವಿಲು ಕಲಾಸುಂದರಿ
ನುಡಿದವು ಕಥನ ಕವನಗಳು
ಪಕ್ಷಿ ಇಂಚರ ದಾಟಿತು
ಕೋಗಿಲೆ ಮತ್ತು ಸೋವಿಯಟ್ ರಷ್ಯಾ
ಅದೆಷ್ಟು ನೋವು ಅಪಮಾನ
ಅಗ್ನಿಹಂಸ ಬೆದರಲಿಲ್ಲ
ಮೌನದಲಿ ಅರಳಿದವು
ಕೃತ್ತಿಕೆ ಕಿಂಕಿಣಿ.
ಅವಳ ಚೆಲುವು ಷೋಡಶಿ
ಕರೆದಳು ಭಾವ
ಚಂದ್ರಮಂಚಕೆ ಬಾ ಚಕೋರಿ
ಒಳಗೊಳಗೇ ಕೊರೆದ ಅನುಭಾವ
ಇಕ್ಷುಗಂಗೋತ್ರಿ ಜ್ಞಾನ ನಿಧಿ
ಮನೆ ಬಿಟ್ಟು ಹೋರಾಟ
ದಿವ್ಯ ಚೇತನ ಅನಿಕೇತನ
ಮನಸು ಜೇನಾಗುವ ಕ್ಷಣ
ಮೌನ ಅನುತ್ತರಾ
ಸರಳತೆಯಲಿ ಮದುವೆ
ಮಂತ್ರಾಕ್ಷತೆ
ಗಟ್ಟಿ ಗೊಂಡಿರಿ ಕದರಡಕೆ
ಹೆದರಲಿಲ್ಲ ಪ್ರೇತಕ್ಯೂ
ತೋರಿದಿರಿ ಕುಟೀಚಕ
ಮಸುಕು ಹರಿದ
ಹೊನ್ನ ಹೊತ್ತಾರೆ
ಇಳುವಿದಿರಿ ಭಾವ ಭಾರ
ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ
ನಿಮಗಿದೋ ನನ್ನ ನಮನ ಕುವೆಂಪು ಕನ್ನಡಿಗರ ಹೃನ್ಮನ

ಕವಿ ಶ್ರೇಷ್ಠ ಕುವೆಂಪುರವರ 23 ಕವನ ಸಂಕಲನಗಳನೊಳಗೊಂಡ ನನ್ನ ಕವನ ಅವರ ಶ್ರೀಚೆತನಕ್ಕೆ ನಮನ


ಡಾ ಶಶಿಕಾಂತ ಪಟ್ಟಣ ರಾಮದುರ್ಗ

About The Author

21 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗಕನ್ನಡಿಗರ ಹೃನ್ಮನ”

  1. ಡಾ ದಾನಮ್ಮ ಝಳಕಿ

    ಕುವೆಂಪುರವರ ಎಲ್ಲಾ ಕವನ ಸಂಕಲನ ನಿಮ್ಮ ಕವನದಲ್ಲಿ ಮೂಡಿವೆ ಇದು ಸುಂದರ ನುಡಿ ನಮನ

  2. ಪ್ರೊ ಶಾರದಮ್ಮ ಪಾಟೀಲ

    ಕನ್ನಡದ ಮೇರು ಕವಿಗೆ ಅರ್ಥ ಪೂರ್ಣ ನುಡಿ ನಮನ

  3. ಎಂತಹ ಅದ್ಭುತ ಭಾವ ಪ್ರಯತ್ನ ನಿಮ್ಮದು ಅರ್ಥಪೂರ್ಣ ಕವನ

  4. Shobha Amarshetti

    ಕುವೆಂಪುರವರ. ಕುರಿತು ನೀವು ಬರೆದ. ಕವನಗಳು ಯಾವಾಗಲೂ ತುಂಬಾ ಚೆನ್ನಾಗಿರುತ್ತವೆ ,ಮತ್ತೆ ಮತ್ತೆ ಆ. ಸಾಲುಗಳು ,ಪದಗಳನ್ನು ಓದಬೇಕು ಎನಿಸುವಂತೆ ,

  5. ಕುವೆಂಪು ಅವರ ಕವನಗಳನ್ನು ಸೊಗಸಾಗಿ
    ಹೊಂದಿಸುತ್ತಾ… ಸರಳವಾಗಿ ಸುಂದರವಾಗಿ
    ಝರಿಯಂತೆ ಜುಳು ಜುಳು ಹರಿಯುತ್ತ ಮೂಡಿ ನಿಂತ ನಿಮ್ಮ ಈ ಕವನ ಎಲ್ಲರ ಮನವನ್ನು ಅಪ್ಯಾಯತೆಯಿಂದ ತಲುಪಿದೆ… ಸರ್
    ಶ್ರೀಚೇತನಕ್ಕೆ ನಿಜವಾದ ನಮನ..

  6. ಡಾ. ಮೀನಾಕ್ಷಿ ಪಾಟೀಲ್ ವಿಜಯಪುರ

    ಒಂದಕ್ಕೊಂದು ಜೋಡಣೆಯಾದ ಭಾವ ಬಂಧ ಕುವೆಂಪುರವರ ಕವನ ಸಂಕಲನಗಳನ್ನು ಇಷ್ಟೊಂದು ಚೆನ್ನಾಗಿ ಕಟ್ಟಿಕೊಟ್ಟಿರುವಿರಿ ಧನ್ಯವಾದಗಳು ಸರ್

Leave a Reply

You cannot copy content of this page

Scroll to Top