ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನ್ನಪೂರ್ಣ ಸುಭಾಷಚಂದ್ರ

ನನ್ನ ದೇಶ ನ ಜಗದಲಿ ಭಾರತ ನಂದನವನ
ಸ್ವಾತಂತ್ರ್ಯವೀರರ ಅಮರಗಾನ
ಸುರಾಜ್ಯ ರಾಮರಾಜ್ಯ ಆಗಮನ
ಹೊಸ ಯುಗವ ಸ್ವಾಗತಿಸೋಣ

ಮಿಂಚುತಿಹಳು ಎಲ್ಲೆಡೆ ಮಹಿಳೆ
ಗಡಿನಾಡಲಿ ದೇಶವ ರಕ್ಷಿಸುತಹಳು
ಬಾನಂಗಳದಲಿ ಹಾರಾಡುತಿಹಳು
ಮಹಿಳೆಯರನು ಗೌರವಿಸೋಣ

ದೇಶದ ಬೆನ್ನೆಲುಬು ಅನ್ನದಾತರ
ವೀರಮರಣವನಪ್ಪಿದ ಯೋಧರ
ಗಡಿಗಳಲಿ ಕಾಯುತಿಹ ಸೈನಿಕರ
ತಾಯಿತಂದೆಗಳಿಗೆ ತಲೆಬಾಗೋಣ

ಭಾರತ ಸತ್ಯಶಾಂತಿ ನೀತಿ ಪಥದಲಿ
ತಂತ್ರಜ್ಞಾನ ತತ್ವಜ್ಞಾನ ಮಾರ್ಗದಲಿ
ಡಿಜಿಟಲ್ಇಂಡಿಯಾ ಆಗುತಿದೆ
ವಿಕಾಸದತ್ತ ಹೆಜ್ಜೆ ಹಾಕೋಣ

ನನ್ನ ದೇಶ ನನ್ನ ಹೆಮ್ಮೆಅಭಿಮಾನ
ರಾಷ್ಟ್ರದ ತ್ರಿವರ್ಣಧ್ವಜದ ಸನ್ಮಾನ
ಮನ ಮನೆಮನೆಗಳಲಿಹಬ್ಬದದಿನ
ಬನ್ನಿಆಚರಿಸಿ ಸಂಭ್ರಮಿಸೋಣ

ಜೈ ಭಾರತ ಜೈ ಕರ್ನಾಟಕ


ಅನ್ನಪೂರ್ಣ ಸುಭಾಷಚಂದ್ರ

About The Author

Leave a Reply

You cannot copy content of this page

Scroll to Top