ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಜುಲ್ ಕಾಫಿಯಾ ಗಝಲ್

ವಿಜಯಪ್ರಕಾಶ್ ಸುಳ್ಯ

ಸುಪ್ತ ಬಯಕೆಗಳು ಭರವಸೆಯಲಿ ಪುಟಿದೇಳುತಿರಲು ಹೃದಯದೊಳಗೀಗ ಚೈತ್ರಾಗಮ
ದಿಟ್ಟ ನಿಲುವುಗಳು ಬದುಕಿನಲಿ ಛಾಪನು ತೋರುತಿರಲು ಮನದೊಳಗೀಗ ಚೈತ್ರಾಗಮ

ಸಂದಿಗ್ಧತೆಗಳನು ಪರಿಹರಿಸಿ ಜತನದಿ ಸಾಗುತಿರಬೇಕು ಜೀವನದಲಿ ಜಂಜಾಟಕೆ ಜಗ್ಗದೆ
ಸಫಲತೆಯ ಸಂತಸದಲಿ ಎದೆ ತುಂಬಿ ನಲಿದಾಡುತಿರಲು ಕನಸಿನೊಳಗೀಗ ಚೈತ್ರಾಗಮ

ದಾನ ಸಿಕ್ಕಿದ ಜನುಮವಿದು ಮದದಿ ಬೀಗುತ ನಡೆದರೆ ಮನುಜ ಕುಲಕದು ಅಪಮಾನ
ಸುಳ್ಳಿನ ಮುಸುಗನು ಸರಿಸಿ ಸತ್ಯ ಸತ್ವವನು ತೋರುತಿರಲು ಬಾಳಿನೊಳಗೀಗ ಚೈತ್ರಾಗಮ

ಮೆಟ್ಟಿಲಾಗು ಪರರ ಏಳಿಗೆಗೆ ಲೆಕ್ಕವಿರಿಸದಿರು ಮೆಟ್ಟಿ ನಡೆದವರ ಹೆಸರುಗಳನು ಕೊನೆಗೆ
ಹಚ್ಚಿಟ್ಟ ಜ್ಞಾನ ದೀವಿಗೆಯು ಪಥಿಕರಿಗೆ ಬೆಳಕಾಗುತಿರಲು ಆತ್ಮದೊಳಗೀಗ ಚೈತ್ರಾಗಮ

ಅಂತರಂಗದ ರಣರಂಗದಿ ನಿನ್ನೆಯ ನನ್ನನು ಮಣಿಸಿ ನಾಳೆಗಳ ಕಟ್ಟುವುದೇ ವಿಜಯ
ದೃಷ್ಟಿಕೋನಗಳು ವಿವೇಚನೆಯ ಅಂಕೆಯಲ್ಲಿರಲು ನಡೆನುಡಿಯೊಳಗೀಗ ಚೈತ್ರಾಗಮ


ವಿಜಯಪ್ರಕಾಶ್ ಸುಳ್ಯ

About The Author

2 thoughts on “ವಿಜಯಪ್ರಕಾಶ್ ಸುಳ್ಯ -ಜುಲ್ ಕಾಫಿಯಾ ಗಝಲ್”

Leave a Reply

You cannot copy content of this page

Scroll to Top