ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ತಿಳಿಯಬೇಕ ಗೆಳೆಯಾ

ಡಾ. ಮೀನಾಕ್ಷಿ ಪಾಟೀಲ

ತಿಳಿಯಬೇಕ ಗೆಳೆಯಾ
ತಿಳಿಯುವ ಮುನ್ನ ಹೊಳಿಯಬೇಕ
ನೆಲದ ತುಂಬೆಲ್ಲ ಹಸಿರಿನ ಹಾಸಿಗಿ
ಇಳೆಗೆಲ್ಲ ಹರೆವುಕ್ಕಿ ಚಿಮ್ಮ್ಯಾವೊ ನೋಡ

ಬಣ್ಣದ ತೊಟ್ಟಿಲಕ ಬಂಗಾರದ ಗೊಂಡೇವ
ಹಿಡಿಯ ಹೋದರದಕ ಕಣ್ಣೀಯ ಸರಪಣಿ
ಕಣ್ಣೀನರಮನೆಯಲ್ಲಿ ರೆಪ್ಪೆಯ ಮಂಚದಿ
ಹೊನ್ನ ಹಗ್ಗವ ಕಟ್ಟಿ ತೂಗ್ಯಾರೋ ನೋಡ

ಮನಸ ಕದ್ದವನ್ಯಾರ ಮುತ್ತನಿಟ್ಟವನ್ಯಾರ
ನತ್ತನಿಟ್ಟು ಬೇಲಿ ಬಿಗಿದವನು ಯಾರ
ಮುತ್ತಿನ ಬಲೆ ಬೀಸಿ ಹೊನ್ನ ಸರಿಗಿ ತೊಡಿಸಿ
ತೋಳಿಗೆ ತೋಳಬಂದಿ ಆದವನು ಯಾರ

ಹೊತ್ತು ಮುಳುಗೋ ಮುಂಚೆ
ಮುತ್ತಿನ ಮಂಟಪ ಕಟ್ಟಿ
ಸುತ್ತೆಲ್ಲ ಮಲ್ಲಿಗೆ ಹರಡ್ಯಾನ ನೋಡ
ಮನವೆಲ್ಲ ಮುದ್ದಾಡಿ ಮುತ್ತಿನ ಮಳೆಯ ಸುರಸ್ಯಾನ ನೋಡ

ಕಾಮನಂಥವನು ಭೀಮನಂಥವನು
ಬಿಸಿ ಅಪ್ಪುಗೆಯ ಬಸಿರಲ್ಲಿ ಬಂದಿಸ್ಯಾನ ನೋಡ
ಹೊನ್ನ ಕಳಸ ಬ್ಯಾಡ ಮುತ್ತು ಮಾಣಿಕ್ಯ ಬೇಡ
ಸರದಾರನ ಪ್ರೇಮದ ದೊರೆತನ ಸಾಕು


ಡಾ. ಮೀನಾಕ್ಷಿ ಪಾಟೀಲ

About The Author

Leave a Reply

You cannot copy content of this page

Scroll to Top