ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ವೈ ಎಂ.ಯಾಕೊಳ್ಳಿ

ಮನವೆಂಬುವ ಮಹಾ ಜಾದೂಗಾರ

ಮನದ ಮಾತನು ನಾನು ಹೇಳಲಾರೆ
ಹೇಳಿದರೆ ನನಗೆ ನಾನೇ ಶತ್ರುವಾಗಬಹುದು
ಇಲ್ಲಿ ಅದೆಷ್ಟು ಮುಚ್ಚಿಟ್ಟ ಕಥೆಗಳಿವೆ
ಅದರೊಳಗೆ ನನ್ಬದೂ ಒಂದು
ಕಥೆಯಂಬುದಷ್ಟೇ ನನ್ನ ಅಳಲು

ಇತಿಹಾಸದ ಪುಟಗಳ ತಗೆದು‌
ನೋಡಿದರೆ ಯಾರಾದರೂ
ಮನದ ಮಾತನು ಮಂದಿಯೆದುರಿಗೆ
ಹೇಳಿದ್ದಾರೆಯೇ?
ಎದ್ದು ಹೋದ ಬುದ್ದನೂ
ಅಲ್ಲಿಯೇ ಉಳಿದ ಸಿದ್ದನೂ
ಎಲ್ಲರೂ ಅವರವರ
ಪಾಳಿಯಲೇ ಉಳಿದದ್ದು

ಹೌದು ಈ‌ ಮನವಾದರೂ
ಎಂಥ ಅನೂಹ್ಯ ಒಗಟು ಅಂತೀರಿ!
ಪ್ರಾಣಕ್ಕೆ ಪ್ರಾಣವೀಯುವ
ಗಂಡ ಹೆಂಡತಿಯರೂ
ಅವರವರ ಸೀಮಾ
ರೇಖೆಯಲಿ ತಟಸ್ಥರು!
ಅಪ್ಪ ಮಗನ ನಡುವೆಯೂ
ಹೇಳದೆಯೇ ಉಳಿದ
ಅದೆಷ್ಟೋ ಮಾತುಗಳು

ಒಮ್ಮೊಮ್ಮೆ ಮನದ‌ ಕಳ್ಳತನ
ಮನಕೆ ಸಿಗದ ಸಂದರ್ಭವೂ
ಇಲ್ಲವೆನ್ನಬೇಡಿ?

ಪಾಪದ ತನು ಮಾತ್ರ .ಆಕಾರ
ತಗೆದು ಹುಟ್ಟಿ ಬೆಳೆದು
ಉಟ್ಟು ಉಂಡು
ಬಡಿದು ಬಡಿಸಿಕೊಂಡು
ಕೊನೆಗೊಮ್ಮೆ
ಮಣ್ಣೊಳಗೊ
ಬೆಂಕಿಯೊಳಗೋ
ಸುಟ್ಟುಹೋಗುತ್ತದೆ

ಹೀಗೆ ಅಲ್ಲವೇ ಲೋಕದಲ್ಲಿ
ಎಲ್ಲ ಮಾಡಿದವರೇ
ತಪ್ಪಿಸಿಕೊಂಡು
ಅಮರ ರಾಗುವದು

ಏನೂ ಮಾಡದವರೇ
ಸುಡುವದು ಮಣ್ಣಾಗುವದು

ಇನ್ನೂ ಏನೆಲ್ಲ ಇದೆ ಬಿಡಿ
ಮನದಲ್ಕಿ ?
ಹೇಳಲಾಗದ ಕಳ್ಳತನ
ಕವಿಗೂ ತಪ್ಪಿಲ್ಲ..


ವೈ ಎಂ.ಯಾಕೊಳ್ಳಿ

About The Author

Leave a Reply

You cannot copy content of this page

Scroll to Top