ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಂಜುಳಾ ಪ್ರಸಾದ್

ನಲ್ಲಾ…

ನೀನಿಲ್ಲದ ಕೊರಗನು ಮುಚ್ಚಿ ಹಾಕಲು
ಮತ್ತೆ ಮತ್ತೆ ನಗುತಲಿರುವೆ ನಾನು!
ಬಿರಿದ ತುಟಿಗಳು ಮುಖದಲ್ಲರಳಿರಲು ಮನದಾಳದ ನೋವು ಕಾಣುವುದೇನು?

ಮುಚ್ಚಿ ಹಾಕುತ ಮನದ ಪ್ರೇಮದುಯಿಲು
ತೋರಿದೆ ಗೆಳೆತನದ ಹುಂಬತನವನು!
ಬಳಿ ಸಾರಿದಾಗ ಎದೆ ಬಡಿತ ಜೋರಾಗಲು
ಆತಂಕಕ್ಕೂ ಹೇರಿಬಿಟ್ಟಿರುವೆ ನಿಷೇಧವನು!

ನಿಜ ಚಹರೆ ತೋರುತಿಲ್ಲ ಎಂದೆನಲು
ನಾಟಕವೆಂಬ ಅನುಮಾನವೇನು?
ಅಂತರಂಗದಿ ಅದೇ ಸಹಜ ಒಲವಿರಲು
ನೋಡಬೇಕಷ್ಟೇ ಒಳಗಣ್ಣು ತೆರೆದು ನೀನು!

ಅವಮಾನವೆನಿಸಿದೆ ಒಂಟಿತನವ ತೋರಲು
ಆದರೂ ನುಂಗಬೇಕಿದೆ ಈ ವಿಷಮವನು!
ಅದಕ್ಕೊಂದು ಪರಿಹಾರವ ನಾ ಹುಡುಕುತಿರಲು
ತೊಡಲು ಕೊಟ್ಟಿತು ಬುದ್ಧಿ ಈ ಮುಖವಾಡವನು!

ಎಲ್ಲವ ಮರೆತಂತೆ ಈಗ ಹಾಯಾಗಿರಲು
ನೀನೇ ಬಂದು ಕೆದಕಬೇಡ ನೆನಪನು!
ಕಾಲಚಕ್ರದಡಿ ಗತವುರುಳಿ ಹೋಗಿರಲು
ಮತ್ತೊಮ್ಮೆ ಕಂಬನಿಗೊಂದು ಹೆಸರಿಡಲೇನು??


ಮಂಜುಳಾ ಪ್ರಸಾದ್

About The Author

1 thought on “ಮಂಜುಳಾ ಪ್ರಸಾದ್ ಕವಿತೆ-ನಲ್ಲಾ…”

Leave a Reply

You cannot copy content of this page

Scroll to Top