ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಡಾ ಅನ್ನಪೂರ್ಣ ಹಿರೇಮಠ,

ಬರಗುಡುತಿಹ ಮಳೆ

ಮಳೆ ಮಳೆ ಸುರಿವ ಮಳೆ
ಹರಿಸಿ ಜರಿ ತೊರಿ ಹೊಳೆ
ಗಾಳಿ ಸೋಕದಂತೆ ಮೋಡ ಚದುರದಂತೆ
ಸುರಿಯುತಿದೆ ಒಂದೇ ಸಮನೆ ಬಿಡದೆ //

ರವಿಯ ಕಾಣಿಸದಂತೆ
ಬೆಳಕ ಭುವಿಗೆ ಹರಿಸದಂತೆ
ನೆಲ ಮುಗಿಲು ಒಂದು ಮಾಡಿ
ಗಗನ ತುಂಬಾ ಮೋಡ ಹರವಿ
ಗುಡುಗು ಸಿಡಿಲಿಲ್ಲದೆ ಮಿಂಚಿನ ಸಂಚಿಲ್ಲದೆ
ಸುರಿಯುತಿದೆ ಬಿಡದೆ ಒಂದೇ ಸಮನೆ//

ಕಾಡ ವನವೆಲ್ಲ ಶಾಂತ ಶಾಂತ
ಗಗನ ಪಥವೆಲ್ಲ ವಿಶ್ರಾಂತ
ಖಗ ಮೃಗಗಳ ಸುಳಿವಿಲ್ಲ
ಹ**ಇಂಚರ ಹಾರಾಟವಿಲ್ಲ
ಚುಕ್ಕಿ ಚಂದಿರರ ಸುಳಿವು ಇಲ್ಲವೇ ಇಲ್ಲ
ಸುರಿಯುತಿದೆ ಮಳೆ ಗಂಗೆ ಕೊಡ ಬಾಗಿಸಿ ಸುರಿವಿದಂತೆ
ಬಿಡದೆ ಒಂದೇ ಸಮನೆ ಸುಂಯ್ ಎನ್ನುತ//

ರುದ್ರ ನರ್ತಿಸಿದಂತೆ ವರುಣನಾರ್ಭಟ
ಚಟಪಟ ಮಳೆ ಹನಿಯ
ತಾಳಮೇಳ ಕಾಳಭೈರವಿ
ನಾದ ನುಡಿಸಿ ಮಾರ್ಧನಿಸಿದಂತೆ
ದಿಗ್ ದಿಗಂತಗಳ ಆವರಿಸಿ
ಬಿಡದೆ ಸುರಿಯುತಿದೆ ಸಾಗರ ಅಬ್ಬರಿಸಿದಂತೆ//

ಮರ ಬಳ್ಳಿಗಳ ಎಲೆ ದನಿದು ಬಾಗಿವೆ
ಕಣಿವೆ ಕಾಲುವೆಗಳು ತುಂಬಿ ಹರಿದು
ಗಂಗೆ ತುಂಗೆಯರ ಒಡಲು ತುಂಬಿ
ಕೊಡಚಾದ್ರಿ ಗಿರಿ ಶಿಖರಗಳು ಕಾಣದಾಗಿ
ಶರದಿ ಮುಳುಗಿಸುತ ಸೆಳೆಯುತಿದೆ
ಜನಜೀವನ ಮನೆ ಮಂದಿರಗಳ
ಸುರಿಯುತಿದೆ ಮಳೆಯ ದಾರಕಾರ ದಣಿವಿಲ್ಲದೆ ನಿರಂತರ//


ಡಾ ಅನ್ನಪೂರ್ಣ ಹಿರೇಮಠ

About The Author

1 thought on “ಡಾ ಅನ್ನಪೂರ್ಣ ಹಿರೇಮಠ, ಬರಗುಡುತಿಹ ಮಳೆ”

  1. ಡಾ.ಜಯಪ್ಪ ಹೊನ್ನಾಳಿ, (ಜಯಕವಿ), ಮೈಸೂರು

    ವಾವ್ ಸೂಪರ್… ಸವಿರಾಗಗಳ ಸವಿಸ್ವಪ್ನಗಳ ಮಳೆಯ ಮಧುರ ರಾತ್ರಿ..!

Leave a Reply

You cannot copy content of this page

Scroll to Top