ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಲತಾ ಧರಣೇಶ್ ಕಡೂರು

ಗಜಲ್

ನಕ್ಕು ನಗಿಸುವ ನಾಟಕವಾಡಿ
ಮುಗ್ಧ ಪ್ರೇಮವಾ ನೋಯಿಸಿದೆ ಸಾಕಿ/
ನನ್ನ ಮನದ ದರ್ಪಣದಲಿ
ಮೂಡಿದ ಆಲೆಗಳ ಕೆಣಕಿಸಿದೆ ಸಾಕಿ/

ಪ್ರೀತಿಸುಗ್ಗಿಯ ಮನಕೆ ತಂದೆ
ಮತ್ತೆ ಕೋಗಿಲೆ ಕೂಗಿದೆ /
ಬಾಹು ಬಂಧನ ಪ್ರೇಮಕೆ
ಜೀವ-ಭಾವವ  ಮೆಚ್ಚಿಸಿದೆ  ಸಾಕಿ /

ಜಾತಿಗೀತಿ ಮೀರಿ ಬೆಳೆದ
ಸ್ನೇಹ ಪ್ರೀತಿ ನಮ್ಮದು/
ಮೋಸ ಪ್ರೇಮದ ವ್ಯಸನಕೆ
ಕಂಗಳು ಕಣ್ಣೀರು ಸುರಿಸಿದೆ ಸಾಕಿ/

ಸಾಕಿಸಲಹಿ  ರಕ್ಕೆ ಬರಿಸಿದ
ಹೆತ್ತಜೀವಗಳ ತೊರೆದು ಬಂದೆ/
ಬಯಸಿ ಬೆರೆತ ಬೆಸುಗೆಯಲಿ
ಎರಕಹೊಯ್ದ ಮುತ್ತು ಸ್ವರ್ಗ ತರಿಸಿದೆ ಸಾಕಿ/

ಹರೆಯದ ಆಸೆಗೆ  ಹಾತೊರೆದು
ಹೆತ್ತವರ ಆಸೆಗೆ ಮಸಿಬಳಿದೆ/
ಮನದ ಖುಷಿಗೆ ಚೇತರಿಕೆ ಇನ್ನೆಲ್ಲಿಯದು?
ಕಳೆದಬದುಕೆ ಸುಖ ಎನ್ನಿಸಿದೆ  ಸಾಕಿ/

——————————–

ಲತಾ ಧರಣೇಶ್ ಕಡೂರು

About The Author

Leave a Reply

You cannot copy content of this page

Scroll to Top