ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಂಜುಳಾ ಜಿ.ಎಸ್.ಪ್ರಸಾದ್

ಅವಳೇ ವಿಶೇಷ

ಹೌದು…ಅವಳೆಂದರೇನೇ ವಿಶೇಷ!
ಅವಳು;
ಪ್ರತಿದಿನ ನಗುವ ಮನೆಬಾಗಿಲಿನ ತೋರಣ,
ಪ್ರತಿಮನದ ಭಾವ ಮಿಡಿಯಲವಳೆ ಕಾರಣ!
ಅವಳು;
ತನ್ನಲೊಂದು ಪುಟ್ಟಜೀವ ಅಂಕುರಿಸುವ ಸೃಷ್ಟಿಕಣ,
ಪರಹಿತಗುಣಿಸಿ ತನ್ನನೋವ ಕಳೆವ ಲೋಕದ ಸಮೀಕರಣ!
ಅವಳು;
ಸುತ್ತಲಿನ ಪ್ರತಿ ತುಡಿತ ಮಿಡಿತಕೂ ಸ್ಪಂದಿಸುವ ಅಂತಃಕರಣ,
ಅರಿಯಲಾಗದ ಅಂತರಾಳವಿರುವ ಅವಳದೊಂದು ವಿಶೇಷಗುಣ!
ಅವಳು;
ಅವಳು ಹೆಣ್ಣು, ರೂಪ ಹಲವು ಅವಳೇ ಮನೆಗೆ ಭೂಷಣ,
ಸಾಮಾನ್ಯ ಬದುಕಲೂ, ಅನುಕ್ಷಣನಲಿವ ಅವಳೆ ಜಗದ ವಿಶೇಷಣ!

————————

ಮಂಜುಳಾ ಜಿ ಎಸ್ ಪ್ರಸಾದ್

About The Author

1 thought on “ಮಂಜುಳಾ ಜಿ ಎಸ್ ಪ್ರಸಾದ್ ಕವಿತೆ-ಅವಳೇ ವಿಶೇಷ”

Leave a Reply

You cannot copy content of this page

Scroll to Top