ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಹುಡುಕಬೇಕು

ಹುಡುಕಬೇಕು ಗೆಳತಿ
ಹುಡುಕಬೇಕು
ಬಣವೆಯೊಳಗೆ ಕಳೆದ
ನಿನ್ನ ಸೂಜಿ ದಾರವನ್ನ
ಹೊಲೆಯಬೇಕು ಗೆಳತಿ
ಜೀವ ಜಾಲವನ್ನ

ಹುಡುಕಬೇಕು ಗೆಳತಿ
ಹುಡುಕಬೇಕು
ಕಡಲಿನೊಳಗೆ ಕರಗಿ
ಮುತ್ತಾದ ನಿನ್ನ ಕಣ್ಣೀರು
ಸರ ಮಾಡಿ ಹಾಕಬೇಕು
ಮೇಲೆ ಕುಳಿತ ಗುರುದತ್ತ

ಹುಡುಕಬೇಕು ಗೆಳತಿ
ಹುಡುಕಬೇಕು
ಬಯಲಿನೊಳಗೆ ಬೆರೆತ
ಉರಿಯ ಬೆಳಕಿನ ಧೂಪ
ಮನುಜ ಪಥದಲಿ ಹೆಜ್ಜೆ
ಶಾಂತಿ ಸಮತೆಯ ರೂಪ

ಹುಡುಕಬೇಕು ಗೆಳತಿ
ಹುಡುಕಬೇಕು
ಸಂತೆ ಸಂದಣಿಯೊಳಗ
ಕಳೆದು ಹೋದ ನಿನ್ನ
ಜಡ ಜಗದೊಳಗೆ ಕಳೆದ
ನಿನ್ನ ಮಧುರ ಭಾವ
ಹುಡುಕಬೇಕು ಗೆಳತಿ


About The Author

4 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ -ಹುಡುಕಬೇಕು”

  1. Uma Bagalkote

    ಅರ್ಥಪೂರ್ಣ ಕವನ ರಚಿಸಿ ಹೊಸ ಶೈಲಿಯಲ್ಲಿ ತಾತ್ವಿಕ ಸ್ವರೂಪ ಹಾಗೂ ಅನುಭವ ತಮ್ಮ ಕವನದಲ್ಲೀ ಮೂಡಿದೆ ಸರ್

  2. ಅನುಭವಪೂರ್ಣ ಮತ್ತು ಎಲ್ಲರೂ ಅರ್ಥೈಸಿಕೊಳ್ಳಬೇಕಾದ ಕವನ… ಸರ್

Leave a Reply

You cannot copy content of this page

Scroll to Top