ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ.ಡೋ.ನಾ.ವೆಂಕಟೇಶ

ಆಪೋಶನ


ಸೀಮಂತಕ್ಕೆ ಹೋಗಿ
ಬರುವಷ್ಟರಲ್ಲೆ ರಸ್ತೆ ನುಂಗಿ
ಆಕೆ ಬಾಣಂತಿ

ಕನಸಲ್ಲ ಕವನವಲ್ಲ
ಮಾತು ಮೌನವಾಗಿತ್ತು
ಮಾಡಿ ಮುಗಿಸಿದ್ದ ಭೋಜನ
ವೈರಾಗ್ಯ ನಂತರದಲ್ಲಿ
ಜೀರ್ಣವಾಗಿತ್ತು
ಜೀವನ ಚಕ್ರ ಸಂಕೀರ್ಣ
ಚರ್ವಿತ ಚರ್ವಣ

ನನಸಲ್ಲಿ ಕಂಡ ಭಾವಿಗೆ
ಕನಸಲ್ಲಿ ಧುಮುಕಿ
ಬಾರದ ಈಜಿನಿಂದ ಬದುಕಿ
ಬಂದ
ಕಣ್ಮುಚ್ಚಿ ತೆರೆದು ಹೋಗೇ ಬಿಟ್ಟ!

ಆಸೆ ಆಕಾಂಕ್ಷೆ ಮೀರಿ

ಸೋದರತ್ತೆ ಊರಿಗೆಲ್ಲ
ಹಾಕಿಸಿದ್ದು ತಿಥಿಯೂಟ
ಎಳ್ಳು ನೀರು


ಡಾ.ಡೋ.ನಾ.ವೆಂಕಟೇಶ

About The Author

6 thoughts on “ಡಾ.ಡೋ.ನಾ.ವೆಂಕಟೇಶ ಕವಿತೆ-ಆಪೋಶನ”

  1. Dr K B SuryaKumar

    ಅಬ್ಬಾ ವಿಧಿಯ ಆಟೋಪವೆ.
    ನನಸಲ್ಲಿ ಕಂಡ ಬಾವಿಗೆ ಕನಸಲ್ಲಿ ಧುಮುಕುವುದು. ಎಂತಹ ಅದ್ಬುತವಾದ ಸಾಲುಗಳು..

  2. ಈ ಕವಿತೆಯ ಶೀರ್ಷಿಕೆ “ಆಪೋಶನ”ತಂಬಾ ಆಸಕ್ತಿದಾಯಕವಾಗಿದೆ ಅದನ್ನು ಓದಿ ಆನಂದವಾಯಿತು
    ಧನ್ಯವಾದಗಳು.

    1. D N Venkatesha Rao

      ನಿಮ್ಮ ಪ್ರೋತ್ಸಾಹಕ್ಕೆ ,ಅಭಿಮಾನಕ್ಕೆ ತುಂಬಾ ಧನ್ಯವಾದಗಳು !

Leave a Reply

You cannot copy content of this page

Scroll to Top