ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಕ್ಕಳ ವಿಭಾಗ

ಲಲಿತಾ ಕ್ಯಾಸನ್ನವರ

ಶಿಕ್ಷಣದ ತೇರನ್ನು ಎಳೆಯಲು ಬನ್ನಿ …..

ಬನ್ನಿ ಬನ್ನಿ ಮಕ್ಕಳೆ ಬನ್ನಿ ಬನ್ನಿ ಬೇಗ
ಸುಂದರ ತೋಟದ ಅರಳುವ ಹೂಗಳೇ

ನಮ್ಮ ಹ್ರುದಯದ ಬಡಿತವೆ ನೀವೆಲ್ಲ
ತಂದೆ ತಾಯಿಗಳ ಕಣ್ಮಣಿಗಳು ತಾವೆಲ್ಲ

ಶಾಲೆ ಮಂದಿರದ ದೇವರುಗಳು ನೀವುಗಳು
ಅಕ್ಷರದ ಮಂತ್ರ ಪೂಜೆ ಕಾದಿದೆ ನಿಮಗಿಲ್ಲಿ…

ಪುಸ್ತಕದ ತೆರದಿ ಸರಸತಿಯು ನಿಮ್ಮ ಬಳಿ
ಅನ್ನದಿ ಅನ್ನಪೂರ್ಣೇಶ್ವರಿಯು ನೆಲೆಸಿಳುಇಲ್ಲಿ

ಕಾಮಧೇನುವಿನ ಕ್ಷೀರವು ಹಣ್ಣು ಹಂಪಲು
ಸಿಹಿಯಾದ ಜ್ಞಾನ ದೀವಿಗೆ ಹಚ್ಚೋಣ ಬನ್ನೀ

ತಾಯಿ ತಂದೆ ಪ್ರೀತಿ ಮಮಕಾರದಲಿ
ಅಣ್ಣ ತಂಗಿಯ ಬಾಂಧವ್ಯದ ಬೆಸುಗೆಯಿದೆ ಇಲ್ಲಿ

ನಿಮ್ಮ ಗುರಿಗೆ ನಾವು ನೀರೆರೆದು ಬೆಳೆಸಿ
ಭವ್ಯ ಭಾರತದ ಕಲಿಗಳ ಮಾಡುವೆವು.ನಿಮ್ಮನೆಲ್ಲ..

ಶಿಕ್ಷಣದ ತೇರನು ಸಂತಸದಿ ಏರಬನ್ನಿ
ಕುಣಿಯುತ ನಲಿಯುತ ಅಕ್ಷರ ಕಲಿಯೋಣ ಬನ್ನಿ..

.———————————–

About The Author

Leave a Reply

You cannot copy content of this page

Scroll to Top