ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ಭಾವಗೀತೆ

ಒಡಲಲಿ ಉರಿಯುವ ಬೆಂಕಿಯ ದಗೆಗೆ
ಮುತ್ತಿನ ಮಳೆ ಹಣಿ ನೀನಾಗು
ತನುವಲಿ ಸುಡುವ ಪ್ರೀತಿಯ ಕಿಚ್ಚಿಗೆ
ಪ್ರೇಮದ ತಂಗಾಳಿ ನೀನಾಗು//

ಮನದಲಿ ನಲಿಯದೆ ನಲುಗುತಿರುವ
ಆಸೆಗೆ ಆಸರೆಯು ನೀನಾಗು
ಹೃದಯದಿ ಹೊತ್ತಿದ ಪ್ರೀತಿಯ ಕಿಡಿಗೆ
ಪ್ರೇಮದ ನಂದಾದೀಪ ನೀನಾಗು//

ರಕುತದಿ ಬೆರೆತಿಹ ಪ್ರೀತಿಯ ನಶೆಗೆ
ಒಲವ ಮಂದಾರದ ನಗೆ ನೀನಾಗು
ನರನಾಡಿಗಳ ತಂತಿಗಳ ತುಡಿತಕೆ
ಸಂಗೀತ ಬೆರೆಸಿ ಹಾಡುವ ಗಾನವು ನೀನಾಗು//

ಉಸಿರಿನ ಬಿಸಿಯಲಿ ನರಳುತಲಿರುವ
ಭಾವಕೆ ಬಂಧುರದ ಪ್ರೇಮಗೀತೆ ನೀನಾಗು
ತನುಮನ ತಲ್ಲಣದಲಿ ಕಂಪಿಸುತ ಕೆಣಕುವ
ಆಸೆಗಳ ತನಿಸುವ ವೈಣಿಕನು ನೀನಾಗು//

ಒಲವದುರಿಯಲಿ ಉರಿವ ಜೀವಕೆ
ಜನುಮಜನುಮದ ಗೆಳೆಯನು ನೀನಾಗು
ನಲುಗುತಲಿರುವ ಮೃದು ಮಲ್ಲಿಗೆ ಬಳ್ಳಿಗೆ
ಆಸರೆಯ ಹಸುರಿನ ಮರವು ನೀನಾಗು//

ಡಾ ಅನ್ನಪೂರ್ಣ ಹಿರೇಮಠ

About The Author

2 thoughts on “ಡಾ ಅನ್ನಪೂರ್ಣ ಹಿರೇಮಠ-ಭಾವಗೀತೆ”

  1. ನಿಜವಾಗಿಯೂ ತಾವು ಒಳ್ಳೆ ಸಾಹಿತಿಗಳು ಕವಿತ್ರಿ ಕೂಡಾ ದನ್ಯವಾದಗಳು

  2. ಚಿನ್ನಪ್ಪಗೌಡ , ಎಂ, ಪಾಟೀಲ್

    ಸಾಹಿತ್ಯ ಸಿರಿ,,,, / ಬಹು ಭಾಷಾ ಕವಿತ್ರಿ

Leave a Reply

You cannot copy content of this page

Scroll to Top