ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುವಾದ ಸಂಗಾತಿ

ನಾನೊಂದು ಕ್ಷಣದ ಕಬ್ಬಿಗನು

ಹಿಂದಿ ಮೂಲ: ಸಾಹಿರ್ ಲುಧಿಯಾನ್ವಿ

ಕನ್ನಡಕ್ಕೆ: ಡಾ. ಶ್ರೀ ಲಕ್ಷ್ಮಿ

ನಾನೊಂದು ಕ್ಷಣದ ಕಬ್ಬಿಗನು
ನನದೊಂದು ಕ್ಷಣದ ಕಥೆ ಇಹುದು
ನನದೊಂದು ಕ್ಷಣದ ಅಸ್ಮಿತೆಯು
ನನದೊಂದು ಕ್ಷಣದ ಜವ್ವನವು

ಹಿಂದೆ ಬಂದ ಕಬ್ಬಿಗರೆಷ್ಟೋ
ಬಂದರು ಮುಂದೆ ಸಾಗಿದರು
ಹಲವರು ನಿಟ್ಟುಸಿರಿಟ್ಟವರು
ಹಲವರು ಶೃತಿಯಲಿ ಹಾಡಿದರು
ಅವರದೂ ಕ್ಷಣವೊಂದರ ಲಾವಣಿಯು
ನನದೂ ಕ್ಷಣವೊಂದರ ಲಾವಣಿಯು
ಯಾರದು ನಾಳೆಯ ಅರಿತವರು
ನಾ ಬೆರೆತಿಹೆ ನಿಮ್ಮಯ ಇಂದಿನಲಿ ॥ನಾನೊಂದು॥

ಬರುವರು ನಾಳೆ ಶೃತಿಗಳ ಬನದಲಿ
ಅರಳುವ ಸುಮಗಳ ಅರಸುವರು
ನನಗೂ ಮಿಗಿಲಾಗಿ ಹಾಡುವರು
ನಿನಗೂ ಮಿಗಿಲಾಗಿ ಕೇಳುವರು
ಇರಬಹುದೆ ಯಾರದೊ ನೆನಪಿನಲಿ
ಯಾರದೊ ನೆನಪಲಿ ನಾ ಏಕಿರಲಿ
ಇಂದಿನ ಬಿರುಸಿನ ಜಗದಲ್ಲಿ
ಕಳೆಯಲೇಕೆ ವೇಳೆಯ ವ್ಯರ್ಥದಲಿ ॥ನಾನೊಂದು॥


About The Author

6 thoughts on “ಅನುವಾದಿತ ಕವಿತೆ-ನಾನೊಂದು ಕ್ಷಣದ ಕಬ್ಬಿಗನು”

  1. ಮೈ ಪಲ್ ದೊ ಪಲ್ ಕಾ ಶಾಯಿರ್ ಹೂಂ
    ತುಂಬಾ ಚೆನ್ನಾಗಿದೆ ಮೇಡಮ್.

  2. ರಾಧಿಕಾ ವಿ ಗುಜ್ಜರ್

    ಹಿಂದಿ ಹಾಡು ಕೇಳಿ ಕೇವಲ ಮಾಧುರ್ಯ ಸವಿದಿರುವವರಿಗೆ ಕನ್ನಡದಲ್ಲಿ ಅದರ ಭಾವ ಮಾಧುರ್ಯ ಉಣಿಸಿದ್ದೀರ. ಬಹಳ ಸುಂದರ ಲಕ್ಷ್ಮಿ ಜೀ

  3. ರಾಜನ್

    ಬಹಳ ಸುಂದರವಾಗಿ ಮೂಡಿಬಂದಿದೆ.
    ಅಭಿನಂದನೆಗಳು.

Leave a Reply

You cannot copy content of this page

Scroll to Top