ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಧಾ ಪಾಟೀಲ

ಪಿಸು ಮಾತು

ಕದ್ದು ಕದ್ದು ಹೇಳುವ
ಹೃದಯದ ಗುಟ್ಟು
ಮನದ ಮಾತು
ಪಿಸು ಮಾತಾಗಿ
ಅಡಗಿತು ನನ್ನ ನಿನ್ನಲ್ಲಿ

ಯಾರಿಲ್ಲ ಸಾಕ್ಷಿ
ನಮ್ಮಿಬ್ಬರ ಮಧ್ಯೆ
ಈ ಪಿಸು ಮಾತುಗಳ
ಲೆಕ್ಕ ಹಾಕಲು ಗುಣಿಸಿ
ಎಣಿಸಿ ಭಾಗಾಕಾರ
ಹಾಕಲು

ಇದೇ ಪಿಸು ಮಾತು
ಹೊನಲಾಗಿ ಹರಿದು
ಕವನ ರೂಪ ತಳೆದು
ನಿನ್ನ ಕಣ್ಣಲ್ಲಿ
ಪ್ರೀತಿಯ ಸೆಲೆ ತುಂಬಿತು

ಕ್ಷಣ ಕ್ಷಣಕ್ಕೆ ಮೂಡಿ
ಮರೆಯಾಗುವ
ಪಿಸು ಮಾತುಗಳ
ಮೋಡಿಯ ಭಾವ
ಖೈದಿಯಾದವು
ನಮ್ಮಿಬ್ಬರಲ್ಲೆ

ಗುನುಗುನಿಸುತಿದೆ
ಪಿಸು ಮಾತುಗಳ
ಒಂದೊಂದು ಶಬ್ದ
ಇಬ್ಬರಲ್ಲೂ
ಕಣಕಣದಲ್ಲೂ
ಸಾಕ್ಷೀಭೂತವಾಗಿ

ಹೆಚ್ಛೇನೂ ಹೇಳಲಾರೆ
ಪಿಸು ಮಾತುಗಳ
ಕಲರವವ
ಕಿಣಿ ಕಿಣಿ ನಿನಾದವ
ಗುನು ಗುನು ಇಂಚರವ

ಪಿಸು ಮಾತುಗಳು
ಬೇಕು ಆಗೊಮ್ಮೆ
ಈಗೊಮ್ಮೆ ಮನಕೆ
ಮಜ್ಜನವೀಯಲು
ಹೃದಯ ಹಗುರವಾಗಲು
ಕಾದ ಮನ ತಂಪಾಗಲು


ಸುಧಾ ಪಾಟೀಲ

About The Author

4 thoughts on “ಸುಧಾ ಪಾಟೀಲ ಕವಿತೆ-ಪಿಸು ಮಾತು”

  1. Raju Kalyanshetty

    ನಿಮ್ಮ ಪಿಸು ಮಾತಿನ ಅಬ್ಬರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸುಧಾ ಪಾಟೀಲ ಮೇಡಂ

  2. ಚೆನ್ನಾಗಿ ಮೂಡಿ ಬಂದಿದೆ ಕವನ ಸುಧಾ ಪಾಟೀಲ ಮೇಡಂ

  3. ನನ್ನ ಕವನ ಮೆಚ್ಚಿದ ಕವಿಮನಸುಗಳಿಗೆ ಧನ್ಯವಾದಗಳು

Leave a Reply

You cannot copy content of this page

Scroll to Top