ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ನಾಶವಾಗದ ರಾಗ

.

ನೂರಾರು ತಿರುವುಗಳ
ಬದುಕಿನ ಹಾದಿಯಲಿ
ಅದ್ಯಾವ ತಿರುವಿನಲಿ
ನೀ ತಿರುಗಿ
ನೋಡಿದೇಯೋ ?

ಸೋಲನ್ನೂ..
ಸೋಲಿಸುವೆನ್ನ
ಭರವಸೆಯ ಹೆಜ್ಜೆ
ಸ್ತಭ್ಧ ವಾಗಿದೆ
ನಿನ್ನ ಮಾತಿಲ್ಲದ
ಮೌನವ ಕಂಡು !!!

ನಲಿಯುವ
ನಯನದಲಿ
ನೀ..‌ಶೀಥ
ಮೌನವೇಕೆ ???

ಇರುಳಲಿ
ಇಣುಕಿದ ನಿನ್ನ
ಕಿರುನಗೆ
ಕಿಟಕಿಯಲಿ ಕಂಡು
ಹುಚ್ಚೆದ್ದ ಕನಸು
ಕಣ್ಣಿನಲಿ !!

ಈ ..ರಾತ್ರಿಯಾದರೂ
ಪಿಸುಮಾತಲಾದರೂ
ನುಡಿಸಿಬಿಡು ನಾಶವಾಗದ
ನವಿರಾದ ರಾಗ !!!

ನನ್ನ ಕಷ್ಟಗಳಿಗೂ
ಸಾವಿದೆ‌.‌.
ಎಂಬರಿವಾಗಲಿ !!!

ನುಡಿಸ ದಿದ್ದರೂ…
ಬೇಸರವಿಲ್ಲ
ದಯಮಾಡಿ
ನೋಯೀಬೇಡ
ಹುಚ್ಚೆದ್ದ ಕನಸಿಗೆ
ನೋವಾದೀ..ತು !


ಇಮಾಮ್ ಮದ್ಗಾರ

About The Author

Leave a Reply

You cannot copy content of this page

Scroll to Top