ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಅನ್ನಪೂರ್ಣ ಹಿರೇಮಠ

ತಂಪು ಹಾಸು

ಬಿಳಿ ಮೋಡ ಮಾಗಿ ತೂಗಿ
ಮಳೆ ಬರುವ ಹಾಗಿದೆ ಇಂದು
ಸೂರ್ಯನನೇ ನುಂಗಿ
ಕಿರಣಗಳ ಮರಿ ಮಾಚಿ
ಬೆಳಕನೆಲ್ಲಾ ಬಾಚಿ)/

ವಸಂತ ಹಸಿರಾಗಿಸಿದ ಗುಡ್ಡ ಬೆಟ್ಟ
ಮಂಜು ಹಾಸಿ ಕಾಣದಾಗಿ
ಎಲೆಗಳ ಮೇಲಿನ ಉದುರೊ ಹನಿಗಳಿಗೆ
ಹೊಲಗದ್ದೆಯೆಲ್ಲ ತಂಪು ತಂಪು
ಜೋತೆ ಹಕ್ಕಿಗಳ ಹಾಡಿನ ಇಂಪು//

ಆಕಾಶ ಬಾಗಿ ತೂಗಿ
ಇಳೆಯ ಚುಂಬಿಸಿದಂತೆ
ಮಣ್ಣ ಕಣ ಕಣದ ಕಂಪು
ಅರಳಿದೂವಿನ ಪರಿಮಳ ಸೇರಿ
ಮನಕೆ ಮಂಪರು ತರಿಸುತಿದೆ//

ಸುಳಿ ಸುಳಿದು ತಾಕುತಿರುವ
ತಂಗಾಳಿಯ ಹೊನಲಗೆ
ಮೈ ಜುಂಮ್ ಎನ್ನಲು
ಬಯಕೆ ಬಾಂದಳ ಕಲಕಿ
ಸ್ಪರ್ಶ ಸುಖವ ಬಯಸಿದೆ ಮನ//


About The Author

1 thought on “ಡಾ ಅನ್ನಪೂರ್ಣ ಹಿರೇಮಠ-ತಂಪು ಹಾಸು”

Leave a Reply

You cannot copy content of this page

Scroll to Top