ಕಾವ್ಯಯಾನ
ಅನುರಾಧಾ ರಾಜೀವ್ ಸುರತ್ಕಲ್
ಗಜಲ್


ನೀಲಿಯ ಬಾನಿನಲಿ ಬೆಳ್ಳಿಮೋಡಗಳ
ಚಿತ್ತಾರ ಬಿಡಿಸಿದವರಾರು
ಕೋಲ್ಮಿಂಚ ಬೆಳಕಲಿ ಕಾಮನಬಿಲ್ಲಿಗೆ
ಬಣ್ಣವ ತೊಡಿಸಿದವರಾರು
ಹಾರುತಿದೆ ಹಕ್ಕಿಗಳು ರೆಕ್ಕೆಯ ಬಡಿದು
ಗೂಡು ಸೇರುವಾಸೆಯಲಿ ಅಲ್ಲವೇ
ತೋರುತಿದೆ ಮುಗಿಲುಗಳು ಸರಿಯುತ
ಮಲ್ಲಿಗೆಯ ಮುಡಿಸಿದವರಾರು
ಬಿಸಿಲ ಬೇಗೆಗೆ ಇಳೆಯು ತಾಪದಿ ಬಳಲಿ
ಬೆಂಡಾಗಿಹಳು ಕೊರಗಿ
ಹಸಿರು ವನದಲಿ ಟಸಿಲು ಒಡೆದು ಹೊಸ
ಸೀರೆಯ ಉಡಿಸಿದವರಾರು
ಇಬ್ಬನಿ ತುಂತುರು ಹರಿದು ಬರಲೊಮ್ಮೆ
ಝರಿಯಂತೆ ತಂಪಾಗಲಿ ತನುವು
ಹಬ್ಬುತ ಮಿಲನದ ಹೂರಣವ ಮನದಿ
ಬಯಕೆ ಮೂಡಿಸಿದವರಾರು
ಮೇಘರಾಜನ ಸಂದೇಶ ಓದುತ್ತಾ ರಾಧೆ
ತೇಲುತಿಹಳು ಮೋಹದಲಿ
ರಾಗದಿ ಸಂಗೀತವ ಹಾಡುತ ಹೃದಯದ
ವೀಣೆಯ ನುಡಿಸಿದವರಾರು




1 thought on “ಅನುರಾಧಾ ರಾಜೀವ್ ಸುರತ್ಕಲ್ ಗಜಲ್”