ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಈಶ್ವರ ಜಿ ಸಂಪಗಾವಿ.

ಗಜಲ್

ನಾವುಗಳು ದೇವನಾಡಿಸುವ ಪಾತ್ರಗಳು
ಜೀವಿಗಳೆಲ್ಲರೂ ಸೂತ್ರದ ಬೊಂಬೆಗಳು

ಅವನಾಜ್ಞೆಗೆ ಹುಲ್ಲುಕಡ್ಡಿ ಮಿಸುಕುವುದಿಲ್ಲ
ದೇವನಾಡಿಸಿದಂತೆ ತೋರುವ ದಾಳಗಳು

ಧರ್ಮ ಕರ್ಮಗಳ ನಡೆಯಲಿ ಭಾಗಿಗಳು
ಪಾಪ ಪುಣ್ಯಗಳಿಗೆ ಹೊಣೆ ಈ ಜೀವಿಗಳು

ಶಾಪ ತಾಪಗಳ ಬೋಗಿಸಲು ಬದ್ಧರಾಗಲಿ
ಪ್ರತಿಫಲವ ಬಯಸುತಿರುವ ಭೋಗಿಗಳು

ಧರ್ಮದಿಂದ ನಡೆದರೆ ಕಾಯದೇ ಧರ್ಮ
ಮರ್ಮ ತಿಳಿಸುವ ಈಶನಿಗೆ ಯೋಗಿಗಳು


ಈಶ್ವರ ಜಿ ಸಂಪಗಾವಿ.

About The Author

Leave a Reply

You cannot copy content of this page

Scroll to Top