ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಎ.ಎನ್.ರಮೇಶ್. ಗುಬ್ಬಿ.

ಉತ್ತರ

ಉತ್ತರ..!

ಕಡಲ ಕೇಳಿದೆ..
“ಹೇಳು.. ನಿನ್ನೊಡಲ
ಜಲವೇಕೆ ಉಪ್ಪುಪ್ಪು..??”

ಕಡಲು ನುಡಿಯಿತು..
“ಸಾವಿರ ನದಿಗಳು
ಧರೆಯ ದುಃಖ-
ದುಮ್ಮಾನಗಳನೆಲ್ಲ
ಬಳಿದು ತಂದು
ತುಂಬಿಸುತಿವೆ……
ನಿತ್ಯ ನನ್ನೊಡಲು.!

ಹಾಗಾಗಿ ಗೆಳೆಯ
ನನ್ನೊಡಲ ತುಂಬ
ತುಂಬಿರುವುದು
ನೀರಲ್ಲ.. ಅದು….
ಜಗದ ಕಂಬನಿ..!!”


ಎ.ಎನ್.ರಮೇಶ್. ಗುಬ್ಬಿ.

About The Author

1 thought on “ಎ.ಎನ್.ರಮೇಶ್. ಗುಬ್ಬಿ. ಕವಿತೆ- ಉತ್ತರ”

Leave a Reply

You cannot copy content of this page

Scroll to Top