ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪರಿಮಳ ಐವರ್ನಾಡು ಸುಳ್ಯ

ಹಸಿರ ರೂಪ ರಾಶಿ

ಅದೆಂತಹ ರೂಪ ರಾಶಿ ತಾಯೇ
ನಿನ್ನಯ ಸೌಂದರ್ಯದ ಮಾಯೆ
ಹಸಿರ ಸೊಬಗಿನ ಸಿರಿಯಲಿ
ಸೆರೆ ಹಿಡಿದಿಹೆ ಸೊಬಗಿನಲಿ

ಸಕಲ ಜೀವಿಯು ನಿನ್ನ ಮಡಿಲಲಿ
ಸಾಗುತಿದೆ ಬದುಕು ನಿನ್ನಪ್ಪುಗೆಯಲಿ
ನೀಲ ಆಗಸ ನಿನಗೆ ಪ್ರಿಯತಮನೋ
ಚುಂಬಿಸಲು ಬಳಿಗೆ ಬಂದಿಹನೋ

ಗರಿಬಿಚ್ಚಿ ನಿಂತಿಹ ಕಲ್ಪವೃಕ್ಷಗಳ ಸಾಲು
ಸಾಲದು ಜನುಮ ಅದರಂದವ ಸವಿಯಲು
ಜುಳು ಜುಳು ಹರಿವಳು ಜಲಧಾರೆ
ಪ್ರಕೃತಿ ದೇವಿಯ ವರಧಾರೆ

ಪಚ್ಚೆವರ್ಣದ ಪರಿಸರವೇ
ನಿನ್ನೊಡಲಲಿ ಉಸಿರಾಡುವೆ
ನಮ್ಮಯ ಈ ಅನುಬಂಧಕೆ
ಶರಣಾಗುವೆ ನಿನ್ನ ಪಾದಕೆ


ಪರಿಮಳ ಐವರ್ನಾಡು ಸುಳ್ಯ

ಸುಳ್ಯ ನಿವಾಸಿಯಾದ ಪರಿಮಳ ಎನ್ ಎಂವಿದ್ಯಾರಶ್ಮಿ ವಿದ್ಯಾಲಯ ಸವಣೂರು ಸಹಶಿಕ್ಷಕಿ
ಪುತ್ತೂರು ದಕ್ಷಿಣ ಕನ್ನಡಹವ್ಯಾಸ.. ಕವನ ರಚನೆ, ಕಿರು ಲೇಖನ ಬರೆಯುವುದು ನೃತ್ಯ ಸಂಯೋಜನೆ

About The Author

Leave a Reply

You cannot copy content of this page

Scroll to Top