ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನ್ನಪೂರ್ಣ ಹಿರೇಮಠ

ಮುಂಗುರುಳ ಮಾಲೆ

ಸೃಷ್ಟಿಸಿರಿ ಮಡಿಲಲಿ
ಭೂತಾಯಿಯ ಒಡಲಲಿ
ನಿಂತ ಆ ಕ್ಷಣದಲಿ
ಬೀಸುವ ಗಾಳಿಗೆ
ಹಾರಾಡೋ ಮುಂಗುರುಳು//

ಗಲ್ಲ ನೇವಸುತ
ಕಣ್ಣ ಕುಲುಕುತ
ಹಣೆಯ ಬೆವರನಿಗೆ
ಜೊತೆ ಜೊತೆಯಾಗಿ
ರವಿಕಿರಣಗಳ ಸೆಳೆಯುತ//

ತಂಬೆಲರ ನಾಚಿಸುತ
ಮುಳುಗೊ ಸೂರ್ಯಕಾಂತಿಯ
ನಿರುಕಿಸುತ ನಿರುಕಿಪಿಸುತ
ಪಡುವಣದಿ ಮುಖ ಮಾಡಿ
ಕಿರುನಗೆಯ ಬೀರುತಿರೆ
ಏನದರ ಬೆಡಗು ಬಿನ್ನಾಣ//

ವೈಯ್ಯಾರದ ಉಡುಗೆ ತೊಟ್ಟ
ಭೂ ರಮೆಯ ಅಂದ ಚಂದ
ಹೊತ್ತು ನಿಂತಿದೆ ಹಚ್ಚಹಸುರಿನ
ಮರಗಳೊಂದಿಗೆ ನಮ್ಮನ್ನೂ
ಹೊತ್ತು,ಮಣ್ಣ ಕಂಪಲಿ
ಬೆರೆತಿತ್ತು ಮರುಳ ಮನ//


ಡಾ ಅನ್ನಪೂರ್ಣ ಹಿರೇಮಠ

About The Author

3 thoughts on “ಅನ್ನಪೂರ್ಣ ಹಿರೇಮಠ ಕವಿತೆ-ಮುಂಗುರುಳ ಮಾಲೆ”

Leave a Reply

You cannot copy content of this page

Scroll to Top