ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸಿದ್ದಲಿಂಗಪ್ಪ ಬೀಳಗಿ

ಹಾಯ್ಕುಗಳು

.


ಹದಗೊಳುತ
ಸಾಗುವ ದಾಂಪತ್ಯಕೆ
ನಿತ್ಯ ಹರೆಯ

ಸಾಯೂ ಜೀವಕೂ
ಸಂಜೀವಿನಿ; ಒಲವು
ತುಂಬಿದ ನಗು

ಮುತ್ತು ಕೊಡುವ
ಸಮ್ಮೇಳನಾಧ್ಯಕ್ಷತೆ
ಭಾರಿ ಪೈಪೋಟಿ

ಕಲಬೆರಿಕೆ
ಕಾಣದ ತಾಣವದು
ಕೂಸಿನ ನಗು

ನಾವಿಕನಾರೋ
ಮುನ್ನಡೆದ ಹಡಗು
ದಡದೆಡೆಗೆ

ನಯನದಾಸೆ
ಬೆನ್ನತ್ತಿ; ಕಳಕೊಂಡ
ಶಯನ ಸುಖ

ತಲೆ ತಗ್ಗಿಸಿ
ನಗುವಾಗೊಮ್ಮೆ ; ಎದೆ
ಬಡಿತ ಜೋರು

ಅವಳಿದ್ದರೆ
ಸಾಕು; ಅವನಿಗೇಕೋ
ಅಮಿತ ಖುಷಿ

ಆಲಿಂಗನದ
ಉಸಿರು; ಬಿಸಿಲಲೂ
ಆಹ್ಲಾದಕರ
೧೦
ಮೋಹ ತೊರೆದ
ಮನವು; ಗೆಲುವಿನ
ನಗೆ ಬೀರಿತು


About The Author

Leave a Reply

You cannot copy content of this page

Scroll to Top