ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ವಿಜಯಲಕ್ಷ್ಮಿ ಕೊಟಗಿ

ಗಜಲ್

ಕಣ್ಣಬಿತ್ತಿಯ ಚಿತ್ತಚೋರ ಚಿತ್ರಗೊಂಬೆಯಾದ ವನು ಮುಚ್ಚಲಾರೆ ಕಣ್ಣನು
ಮೂಡಿರುವದು ಬರಿ ಬಿಂಬವಲ್ಲ ನಜರ್ ಬಂಧಿಯಾದವನು ಮುಚ್ಚಲಾರೆ ಕಣ್ಣನು

ಪೌರ್ಣಿಮೆಯ ಬೆಳದಿಂಗಳಲ್ಲಿ ನಮ್ಮಿಬ್ಬರ ಚುಪಾಚುಪಿಯಾಟಕೆ ಶಶಿಯೇ ಸಾಕ್ಷಿ
ಕಣ್ಣಂಚಿನ ಮಿಂಚಿನಲ್ಲಿ ತೂರಿ ನಕ್ಷತ್ರವಾದವನು ಮುಚ್ಚಲಾರೆ ಕಣ್ಣನು

ಚಣವೂ ಕಣ್ಣೆವೆ ಕದಲಿಸೆನು ಕಾಪಿಟ್ಟ ಸಂಜ್ಞೆಗಳ ಗುಟ್ಟು ರಟ್ಟಾಗಬಹುದು
ಎದೆಗೂಡಿನ ಭಾವಹಕ್ಕಿಗೆ ಸದಾಕಾವಲಾದವನು ಮುಚ್ಚಲಾರೆ ಕಣ್ಣನು

ನಿದಿರೆಯ ಆಲಿಂಗನವಿಲ್ಲ ಹಗಲುಗನಸು ಗಳದೇ ಸಾಲು ಸಾಲು ಮೆರವಣಿಗೆ
ಗಾಳಿಗುದುರೆಯೇರಿದ ಚದುರ ಮನವ ನಾವರಿಸಿದವನು ಮುಚ್ಚಲಾರೆ ಕಣ್ಣನು

ನನ್ನದೇ ಅಕ್ಷಿಯ ಹೊಂಬೆಳಕ ಪಕ್ಷಿನೋಟದಿ ಕಂಗೊಳಿಸಿದ ಮದನಮೋಹನ
ನೆನಪುಗಳ ಮೂಟೆಯನೇ ಹೊತ್ತು ಮತ್ತೆ ಕನಸಾದವನು ಮುಚ್ಚಲಾರೆ ಕಣ್ಣನು

ಹರಿಯಗೊಡುವುದಿಲ್ಲ ಕೊಂಚವೂ ವಿರಹದಿ ನೊಂದಿರುವ ವಿಜಿಯ ಕಣ್ಣೀರಧಾರೆ
ಕೆನ್ನೆಗುಂಟ ಜಾರಿ ಕುಳಿಯಲಿ ಕರಗಿ ಬಣ್ಣವಾದವನು ಮುಚ್ಚಲಾರೆ ಕಣ್ಣನು.


About The Author

Leave a Reply

You cannot copy content of this page

Scroll to Top