ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಮಹಾದೇವಿ ಪಾಟೀಲ

ಮಂಕಾದ ಜಯಂತಿಗಳು

ಗಾಂಧಿ ಬುಧ್ದ ಬಸವ ಅಂಬೇಡ್ಕರರ‌
ಜಯಂತಿಗಳು‌ ಮಂಕಾಗಿ ಹೋಗಿವೆ
ಶ್ರೀಮಂತರ ರಾಜಕಾರಣಿಗಳ ಸೆಲೆಬ್ರೇಟಿಗಳ
ಹುಟ್ಟು ಹಬ್ಬಗಳ ಅಬ್ಬರದ ಮುಂದೆ||

ದಿವ್ಯ ನೇತಾರರ ಭವ್ಯ ಮೂರ್ತಿಗಳು
ಮಸುಕಾಗಿ ಹೋಗಿವೆ ನೋಡುವವರೇ ಇಲ್ಲ
ದಿನಕ್ಕೊಂದರಂತೆ ನೇತು ಹಾಕುವ
ದೊಡ್ಡ ದೊಡ್ಡ ಕಟೌಟ್ ಗಳ ಮುಂದೆ||

ಮಹಾಮಹಿಮರ ಆದರ್ಶದುಕ್ತಿಗಳು
ಅರ್ಥ ಕಳೆದುಕೊಂಡು ಸೊರಗಿವೆ
ಜಾತೀಯತೆಯನು ಎತ್ತಿ ಹಿಡಿದು
ಮಾತಾಡುವ ಪೊಳ್ಳು ಭಾಷಣಗಳ ಮುಂದೆ||

ದೇಶಕ್ಕಾಗಿ ತ್ಯಾಗ ಬಲಿದಾನಗೈದ
ಸಾಹಸದ ಕಥೆಗಳು ಕೇವಲ ಇತಿಹಾಸವಾಗಿವೆ
ಸ್ವಪ್ರಶಂಸೆ,ಸ್ವಪ್ರತಿಷ್ಠೆ,ಸ್ವಹಿತಾಸಕ್ತಿಗಳ
ನಾಟಕೀಯ ಬದುಕಿನ ಮುಂದೆ||
‌‌‌‌‌‌‌ ಮಹಾದೇವಿ ಪಾಟೀಲ..


About The Author

Leave a Reply

You cannot copy content of this page

Scroll to Top