ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ನಳಿನ ಡಿ ಚಿಕ್ಕಮಗಳೂರು

ಪ್ರಿಯನ ಸಾನಿದ್ಯ

ಹೊಂಗನಸಿನ ಅಂಗಳದಿ,
ಬಿರಿದ ಮಲ್ಲಿಗೆಯ ಪರಿಮಳವು
ಬಾ ಎಂದು ಕೈಬೀಸಿ ಕರೆಯುತ್ತಿದೆ..

ಕೆಂದಾವರೆಯ ಕಂಗಳಲಿ,
ಘನಶ್ಯಾಮನ ಮೋಡಿಯಲಿ
ಮುರಳಿ ನಾದವು ಹೊಮ್ಮಿ

ಎನ್ನ ವಕ್ಷೋಜಗಳಲಿ ನಲಿದು
ಆನಂದದುಂಬಲು ಒಲಿದು
ಚುಂಬಕ ಗಾಳಿಯ ಆಹ್ವಾನ,

ಸುಗಂಧ ಪುಷ್ಪಗಳು ಸಮ್ಮಿಲನಕೆ
ಘಮ್ಮೆಂದು ತೂಗುತಿವೆ
ವನರಾಶಿಯಲ್ಲಿ..

ಒಲವು ಮೂಡದಿರೆ
ನಾವು ಅನಾಮಿಕರು
ಲೋಕದಲಿ..

ಈ ಒಲವಿಗೆ ಉಸಿರಾದಿರೇಕೆ?
ಹೀಗೆಯೇ ಹೇಗೋ ಇದ್ದ
ಮನಸಿಗೆ‌ ಜೊತೆಯಾದಿರಿ ಏಕೆ?

ಒಂಟಿ ದಾರಿಯಲಿ ಹೂದಂಡೆ ಸಿಕ್ಕಂತೆ,
ಮುಡಿತುಂಬಾ ತುಂಬಿಕೊಂಡು,
ಮನಸು ತುಂಬಿ ಹೋದಿರಿ..

ಯಾವ ಸೀಮೆಯ ಪ್ರೇಮ ಇದೆಲ್ಲಾ?


ನಳಿನ ಡಿ ಚಿಕ್ಕಮಗಳೂರು

About The Author

1 thought on “ನಳಿನ ಡಿ ಚಿಕ್ಕಮಗಳೂರು ಕವಿತೆ-ಪ್ರಿಯನ ಸಾನಿದ್ಯ”

Leave a Reply

You cannot copy content of this page

Scroll to Top