ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಂಬೇಡ್ಕರ್ ಜಯಂತಿ ವಿಶೇಷ

ಸವಿತಾ ಮುದ್ಗಲ್.

ಅಂಬೇಡ್ಕರ್

ಭಾರತದ ಸರ್ವ ಮಹಾ ನಾಯಕನು
ಬಾಬಾ ಸಾಹೇಬ ಅಂಬೇಡ್ಕರನು
ಭಾರತದ ಪ್ರಜಾಪ್ರಭುತ್ವಕೆ ನೀನು
ಬಹುದೊಡ್ಡ ಆಸ್ತಿಯಂತೆ ನಮಗಿನ್ನು

ಸಂವಿಧಾನದ ರಚನೆ ಮಾಡಿದವರು
ಅಸ್ಪೃಶ್ಯತೆ ಹೋಗಲು ಶ್ರಮಿಸಿದವರು
ಶ್ರೇಷ್ಠವಾದ ಪುಸ್ತಕಕೆ ಪ್ರೇಮಿಯಾದವರು
ಮೂಕಪತ್ರಿಕೆಯ ಚಲಾವಣೆ ಮಾಡಿದರು

ಮಾನವೀಯತೆಗೆ ಹರಿಕಾರರಾದವರು
ಜಾತಿಭೇದಕೆ ಹೋರಾಟ ಮಾಡಿದವರು
ಮನಪಾವನ ಮಾಡಿದ ನಾಯಕರವರು
ಕಷ್ಟದಿ ಓದಿ ಸಮಾಜದ ಮಾದರಿಯಾದವರು

ನಿಮಗಿದೋ ನುಡಿನಮನ ಸಲ್ಲಿಸುವೆವು
ತೊರೆದಿಲ್ಲ ಜನರಲ್ಲಿರುವ ಜಾತಿ ಬೇಧವು
ಅಸಮಾಧಾನ ಆಗುತ್ತಿತ್ತೇನೋ ನೋಡಿದ್ದರೆ
ಎಂದು ಬದಲಾವಣೆ ಆಗದ ಮನಸ್ಥಿತಿಗಳು


About The Author

1 thought on “”

  1. ಹೃತ್ಪೂರ್ವಕ ಧನ್ಯವಾದಗಳು ಮಧುಸೂದನ್ ಸರ್ ಗೆ

Leave a Reply

You cannot copy content of this page

Scroll to Top