ಬಸವ ಜಯಂತಿ ವಿಶೇಷ
ಆದಪ್ಪ ಹೆಂಬಾ ಮಸ್ಕಿ
ನಕ್ಕೊಮ್ಮೆ ದಾರಿಬಿಡಿ
. ನಮ್ಮೂರ ಸಾಲ ಮಾಡುವ ಸಿದ್ದರಾಮ
ಸಾಲ ಕೊಡುವ ಕೋದಂಡರಾಮ
ಇಬ್ಬರೂ ಒಂದನಂತೂ
ಬಿಡುತ್ತಿಲ್ಲವಯ್ಯ
ಸಿದ್ದರಾಮನ ಕರುಳು ತೂತು ಬಿದ್ದರೂ ಕುಡಿಯುವುದು ಕುಡಿಯುವುದು ಬಿಡುತ್ತಿಲ್ಲ
ಕೋದಂಡರಾಮನಿಗೆ ಮಧು ಮೇಹ
ಏರುತ್ತಿದ್ದರೂ ಮೀಟರ್ ಬಡ್ಡಿ ವ್ಯಾಮೋಹದ ವ್ಯಸನವು ಕಾಣ
ಗೊರವೂರ ತ್ರಿಕೂಟಲಿಂಗೇಶ್ವರ
2. ಭತ್ತವನ್ನು ಅಕ್ಕಿ ಮಾಡುವುದು ರೈಸ್ ಮಿಲ್
ರಾಗಿಯನ್ನು ಹಿಟ್ಟು ಮಾಡುವುದು
ಫ್ಲೋರ್ ಆಂಡ್ ಹಲ್ಲರ್ ಮಿಲ್
ಇವುಗಳ ಕಂಡು ಹಿಡಿದವನು ಮನುಜನಯ್ಯ
ಅನ್ನ ಆಹಾರವನ್ನು ಕರಗಿಸುವ
ಮನುಜನ ಕರುಳು ಸೃಷ್ಟಿಸಿದ ಕರುಣಾಳು ಯಾರು ಗೊರವೂರ ತ್ರಿಕೂಟಲಿಂಗೇಶ್ವರ
….
You cannot copy content of this page