ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹನಿಬಿಂದು

ದಶಕ

ರಾಜ ರಾಣಿ ಆಗಬೇಕು ಎಂಬ ಕನಸು ಮನದಲಿ
ರಾಜ ತಾನು ಅಲ್ಲವಾದ್ರೂ ರಾಣಿ ಬೇಕು ಬಾಳಲಿ
ರಾಣಿ ಆಗೋ ಹಂಬಲವು ಸದಾ ಇರಲಿ, ಸಹಜ
ಬಾಳು ಸವೆಸ ಬೇಕಿರುವುದು ಇದ್ದುದರಲ್ಲೇ ನಿಜ!

ಅವರು ಇವರು ಹೇಗಿರಲಿ ನಮಗೆ ಏನು ಜಗದಲಿ?
ಸುಖ ಸಂತೋಷವ ನಿತ್ಯ ನಾವು ಕಾಯಬೇಕು ಬಾಳಲಿ
ಪರರ ಚಿಂತೆಗಿಂತ ಮುಖ್ಯ ಸ್ವಂತ ಬದುಕು ನಮ್ಮದು
ಶಾಂತಿಯಿಂದ ಕಳೆಯಬೇಕು, ಎಂದೂ ಕ್ಷಣವು ನಿಲ್ಲದು.

ಆಚೆ ಮನೆಯ ಜನರ ಕಡೆಗೆ ದೃಷ್ಟಿ ಬೀಳದಿರಲಿ
ನಮ್ಮ ಬದುಕು ಎಂದೂ ಹೀಗೆ ಹಾಳಾಗದೆ ಇರಲಿ.


About The Author

Leave a Reply

You cannot copy content of this page

Scroll to Top