ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹನಿಬಿಂದು(ಪ್ರೇಮಾ ಆರ್ ಶೆಟ್ಟಿ)

ಓಟನು ಹಾಕೋಣ

ಹಾಕೋಣ ನಾವು ಓಟನು ಹಾಕೋಣ
ನಮ್ಮ ನಾಯಕರನ್ನು ಆರಿಸೋಣ
ಒಳ್ಳೆ ನಾಯಕರನ್ನು ಆರಿಸೊಣ..

ಆ ಪಕ್ಷ ಈ ಪಕ್ಷ ಅದನು ನೋಡ ಬೇಡಿರಿ
ಉತ್ತಮ ನಾಯಕನಿಗೆ ಸೀಟು ನೀಡಿ
ನಿಮ್ಮ ಅಮೂಲ್ಯ ಮತದಾನ ಮಾಡಿ
ಉಡುಗೊರೆಯಾಗಿ ಸಿಗುವ ಸಣ್ಣ ವಸ್ತುಗಳಿಗೆ
ನಮ್ಮ ಮತವ ಮಾರದೆ ಇರೋಣ

ದೇಶದ ಉದ್ಧಾರ ನೋಡಿ
ರಾಜ್ಯ ಜಿಲ್ಲೆ ಮುಂದೆ ಸಾಗೋ
ಹಳ್ಳಿಗಳ ಬೆಳೆಸುವಂತ ನಾಯಕ ಬರಲಿ

ಊರು ಕೇರಿ ಬಡವರ ಹಣವ
ಕೊಳ್ಳೆ ಹೊಡೆಯುವಂತ ಜನಕೆ
ಮತವ ನೀಡಿ ಬೆಳೆಸಬೇಡಿರಿ
ನಿಮ್ಮ ಮತಗಳನೆಂದೂ ಮಾರ ಬೇಡಿರಿ

ಮತದಾನ ಎಲ್ಲರ ಹಕ್ಕು
ಪಕ್ಷ ಜನರೂ ನಿಮ್ಮದೇ ಆಯ್ಕೆ
ಆಮಿಷಕ್ಕೆ ಬೀಳ ಬೇಡಿರಿ
ಮುಂದಿನ ದೇಶದ ಭವಿಷ್ಯ ನೋಡಿರಿ

ಮತದಾರ ಇಂದು ರಾಜ
ನಿನ್ನ ಕೈಲಿ ದೇಶ ರಾಜ್ಯ
ಹಾಳು ಯೋಚನೆ ಬಿಟ್ಟು ಬಿಡೋಣ
ಒಳ್ಳೆ ಜನರಿಗೆ ಪಟ್ಟ ಕೊಡೋಣ
ನ್ಯಾಯಕ್ಕೆoದೂ ಜಯವ ಕೊಡೋಣ
ಉತ್ತಮ ಗುಣವಂತನಿಗೆ ಓಟು ಕೊಡೋಣ

——————————————-

@ಹನಿಬಿಂದು@

About The Author

Leave a Reply

You cannot copy content of this page

Scroll to Top