ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರೊ. ಸಿದ್ದು ಸಾವಳಸಂಗ

ಪ್ರಕೃತಿ ವಿಕೋಪದ ಉರಿಗಳು

ಅನ್ಯಾಯದಿ
ಬೆಂದ ನಿಸರ್ಗ !
ಮನುಜನ ಬಾಳಲ್ಲಿ
ಎಲ್ಲಿದೆ ಸ್ವರ್ಗ !!

ಪರಿಸರದಲ್ಲಿ
ಆಗಾಗ ಸುನಾಮಿ !
ಭೂಮಿಯ ಮೇಲಿನ
ಜನ ಎಂತಹ ಹರಾಮಿ !!

ಈ ಭೂಮಿ
ಯಾರಪ್ಪನ ಆಸ್ತಿ !
ಹಾಳು ಮಾಡಿದರೆ
ತಕ್ಕ ಶಾಸ್ತಿ !!

ನಿಸರ್ಗ ಮುನಿದಾಗ
ಭಾರಿ ಭೂಕಂಪ !
ಮನುಜನ ಬದುಕಲಿ
ಎಲ್ಲಿದೆ ಕಂಪು-ತಂಪ !!

ಪ್ರಕೃತಿಯಲ್ಲಿ
ದಿನ ದಿನಕ್ಕೆ ವಿಕೋಪ !
ಪಾಪಿ ಮನುಜ
ಮಡಿದ ಅನ್ಯಾಯದ ಪ್ರತಿರೂಪ !!


About The Author

Leave a Reply

You cannot copy content of this page

Scroll to Top