ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪರಿಮಳ ಎನ್ ಎಂ

ಶಿಕ್ಷಣವೇ ಶಕ್ತಿ

ಶಿಕ್ಷಣವೆಂಬುದು ಬತ್ತದ ಕಡಲು
ಜ್ಞಾನದಾಹಿಗಳ ಅರಿವಿನ ಒಡಲು
ಕಲಿಯುತ ತಿಳಿಯುತ ಮುಂದೆ ಸಾಗಲು
ಮುಕ್ತವಾಗುವುದು ಅಂಧಕಾರದ ಅಮಲು

  ವಿದ್ಯಾರ್ಜನೆ ಬಾಳಿನ ಶಕ್ತಿಯು
  ತಡೆಯಿಲ್ಲದೆ ಹರಿಯಲಿ ನಿತ್ಯವು
  ಸುಸ್ಥಿರ ಸಮಾಜಕೆ ತಳಹದಿಯು
  ನಿತ್ಯ ನಿರಂತರ ಉನ್ನತಿಯು

ವಿದ್ಯಾವಿಹೀನನು ಪಶು ಸಮಾನನು
ಅರಿತು ನಡೆದರೆ ಜ್ಞಾನಿಯಾಗುವನು
ದೇಶವ ಕಟ್ಟಲು ಸಹಕಾರಿಯವನು
ತಾಯಿ ಭಾರತಿಯ ದಿವ್ಯ ಸುತನು

    ವಿಶ್ವಪಥವ ತೋರುವ ಅಮೃತ
    ಗುರುಗಳ ಒಲುಮೆಯ ನುಡಿಯಮೃತ
    ಹಿರಿಯರ ನೀತಿಯಲಿ ವಚನಾಮೃತ
    ಸಾರ್ಥಕ ಜೀವನಕೆ ಸಿಹಿಯಮೃತ

ಬಾಳಿಗೆ ಭರವಸೆಯೇ ಶಿಕ್ಷಣವು
ನೈತಿಕ ಬದುಕಿನ ಸಾಕ್ಷರತೆಯು
ಇಂದಿನ ಮಕ್ಕಳ ದಾರಿದೀಪ
ಮುಂದಿನ ಪ್ರಜೆಗಳ ಸರ್ವಶಕ್ತಿ
——————————————-

About The Author

1 thought on “ಪರಿಮಳ ಎನ್ ಎಂ ಕವಿತೆ-ಶಿಕ್ಷಣವೇ ಶಕ್ತಿ”

Leave a Reply

You cannot copy content of this page

Scroll to Top